ಬೆಂಗಳೂರು: ನಗರದ ಶೇಷಾದ್ರಿಪುರಂನಲ್ಲಿರುವ ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜದ ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆ ಪ್ರಕ್ರಿಯೆ ಜರುಗಿದೆ. ರಾಜ್ಯ ವಿಶ್ವಕರ್ಮ ಸಮಾಜದ ಕಚೇರಿಯಲ್ಲಿ ಇಂದು ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಸಮಾಜದ ಎಲ್ಲಾ ಜಿಲ್ಲೆಗಳಿಂದ ಆಗಮಿಸಿದ್ದ ನಿರ್ದೇಶಕರುಗಳ ಸಮಾಕ್ಷಮ ನೂತನ ಪದಾಧಿಕಾರಿಗಳ ಆಯ್ಕೆ ಜರುಗಿದ್ದು ಕೆಳಕಂಡವರು ಅವಿರೋಧವಾಗಿ ಸಮಾಜದ ನೂತನ ಪದಾಧಿಕಾರಿಗಳಾಗಿ ಆಯ್ಕೆಗೊಂಡಿರುತ್ತಾರೆ.
- ಗೌರವ ಅಧ್ಯಕ್ಷರಾಗಿ: ಬಿ. ಉಮೇಶ್
- ರಾಜ್ಯಾಧ್ಯಕ್ಷರಾಗಿ: ಎಂಪಿ ಈಶ್ವರಾಚಾರ್
- ಕಾರ್ಯಾಧ್ಯಕ್ಷರಾಗಿ: ಬಾಬು ಪತ್ತಾರ್
- ಉಪಾಧ್ಯಕ್ಷರಾಗಿ: ಡಿ.ಎಲ್. ರವಿಶಂಕರ್
- ಉಪಾಧ್ಯಕ್ಷರಾಗಿ: ಕೆ ಎಸ್ ರೇವಣ್ಣ
- ಉಪಾಧ್ಯಕ್ಷರಾಗಿ: ಬಿ. ಕುಮಾರ್
- ಉಪಾಧ್ಯಕ್ಷರಾಗಿ: ರಾಮಪ್ಪ ಕೆ.ಬಡಿಗೇರ್
- ಪ್ರಧಾನ ಕಾರ್ಯದರ್ಶಿಯಾಗಿ: ಎಂ.ಪಿ ಶರತ್ ಚಂದ್ರ
- ಖಜಾಂಚಿಯಾಗಿ: ಕೆ ಎಸ್ ಲಕ್ಷ್ಮಣ್
- ಸಂಘಟನಾ ಕಾರ್ಯದರ್ಶಿಯಾಗಿ: ಎಚ್ಎಸ್ ಸವಿತಾ
- ಸಂಘಟನಾ ಕಾರ್ಯದರ್ಶಿಯಾಗಿ: ಎಸ್. ನಾಗರಾಜಾಚಾರಿ
- ಸಂಘಟನಾ ಕಾರ್ಯದರ್ಶಿಯಾಗಿ: ಕೆ ಚಂದ್ರಶೇಖರಾಚಾರಿ
- ಸಂಘಟನಾ ಕಾರ್ಯದರ್ಶಿಯಾಗಿ: ಎಂ ಎನ್ ಸುದರ್ಶನ್ ಕುಮಾರ್
- ಸಹ ಕಾರ್ಯದರ್ಶಿಯಾಗಿ: ಕಾಳಮ್ಮ w/o ಈಶಪ್ಪ ಪತ್ತಾರ್
- ಸಹ ಕಾರ್ಯದರ್ಶಿಯಾಗಿ: ನೀಲಮ್ಮ w/o ಶಿವರಾಜ್ ಪತ್ತಾರ್
- ಸಹ ಕಾರ್ಯದರ್ಶಿಯಾಗಿ: ಡಿ. ಮೌನೇಶ
- ಸಹ ಕಾರ್ಯದರ್ಶಿಯಾಗಿ: ಎಚ್ .ಕೆ. ಶೈಲಾ
- ಕಾನೂನು ಸಲಹೆಗಾರರಾಗಿ: ಕೆ .ಎಸ್ ಚಂದ್ರಶೇಖರ್
ಮೇಲ್ಕಂಡವರುಗಳನ್ನು ಸಮಾಜದ ನೂತನ ಪದಾಧಿಕಾರಿಗಳಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆಂದು ಚುನಾವಣಾಧಿಕಾರಿ ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿ (ನಿ) ಎಸ್. ವಿ ತಿರುಮಲೆ ಅವರು ಘೋಷಿಸಿದರು.
ಇವರಿಗೆ ಕರ್ನಾಟಕ ರಾಜ್ಯ ವಿಶ್ವಕರ್ಮ ಜನಸೇವಾ ಸಂಘದ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷರು ಹಾಗೂ ಹಿರಿಯ ಪತ್ರಕರ್ತರಾದ ಡಾ. ಭಾಸ್ಕರ್ ಮತ್ತು ಭಾಸ್ಕರ ಪತ್ರಿಕಾ ಬಳಗ ಅಭಿನಂದನೆ ಸಲ್ಲಿಸಿದ್ದಾರೆ.



