ತುಮಕೂರು: ಆರ್ ಸಿಬಿ ವಿಜಯೋತ್ಸವದ ವೇಳೆ ಮೊಮ್ಮಗ ಮನೋಜ್ ಸಾವಿನ ಸುದ್ದಿಗೆ ಆಘಾತಕ್ಕೆ ಒಳಗಾಗಿದ್ದ ಅಜ್ಜಿ ಮೃತಪಟ್ಟಿರೋ ಘಟನೆ ಕುಣಿಗಲ್ ತಾಲ್ಲೂಕಿನ ನಾಗಸಂದ್ರದಲ್ಲಿ ನಡೆದಿದೆ.
ಮನೋಜ್ ಅಜ್ಜಿ ದೇವಿರಮ್ಮ (70) ಮೃತಪಟ್ಟ ವೃದ್ಧೆಯಾಗಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದಿದ್ದ ಕಾಲ್ತುಣಿತ ಪ್ರಕರಣದಲ್ಲಿ ಮನೋಜ್ ಸೇರಿದಂತೆ 11 ಮಂದಿ ಮೃತಪಟ್ಟಿದ್ದರು.
ಮೊಮ್ಮಗ ಮನೋಜ್ ಮೃತಪಟ್ಟ ಸುದ್ದಿಯಿಂದ ಆಘಾತಗೊಂಡಿದ್ದ ಅಜ್ಜಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಇದೀಗ ಕೊನೆ ಉಸಿರು ಎಳೆದಿದ್ದಾರೆ.

