ಆರ್ ಸಿಬಿ ವಿಜಯೋತ್ಸವಕ್ಕೆ ಬಲಿಯಾದ ಮನೋಜ್ ಕುಟುಂಬಕ್ಕೆ ಪರಿಹಾರ ಚೆಕ್ ವಿತರಣೆ

ಭಾಸ್ಕರ ಪತ್ರಿಕೆ
0

ತುಮಕೂರು: ಆರ್ ಸಿಬಿ ವಿಜಯೋತ್ಸವದ ವೇಳೆ ಮೃತಪಟ್ಟ ತುಮಕೂರು ಮೂಲದ ಮನೋಜ್ ಕುಟುಂಬಕ್ಕೆ ಸರ್ಕಾರದ ಆದೇಶದಂತೆ 25 ಲಕ್ಷ ರೂ ಹಣದ ಚೆಕ್ ಅನ್ನು ತುಮಕೂರು ಎಸ್ಪಿ ಶುಭ ಕಲ್ಯಾಣ್ ರಿಂದ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೃತ ಮನೋಜ್ ತಂದೆ ದೇವರಾಜ್, ಚೆಕ್ ಕೊಟ್ಟಿದಾರೆ ಸರ್ ಮಗ ಬರೊಲ್ವಲ್ಲ. ಚೆಕ್ ಕೊಟ್ಟರೆ ಮಗಾ ಬರ್ತಾನಾ, ಇದ್ದೊನು ಒಬ್ಬನೇ ಮಗ ಎಂದು ನೊಂದು ನುಡಿದರು.

25 ಲಕ್ಷ ಚೆಕ್ ಕೊಟ್ಟಿದ್ದಾರೆ, ಈ ಹಣ ನನ್ನ ಉಪಯೋಗಕ್ಕೆ ನಾನೇನು ಮಾಡಿಕೊಳ್ಳಲ್ಲ. ನನ್ನ ಮಗಳು, ಅವರ ಅಮ್ಮನಾಕೌಂಟ್ ಗೆ ಹಾಕುತ್ತೇನೆ. ಅವರ ಜೀವನಾಂಶಕ್ಕೆ ಹಣ ಇಡುತ್ತೇನೆ ಎಂದರು.

ಬಂದ ಚೆಕ್ ಹಣದ ಒಂದು ರೂಪಾಯಿ ಸಹ ಖರ್ಚು ಮಾಡಿಕೊಳ್ಳಲ್ಲ. ದುಡ್ಡು ಕೊಟ್ಟರೆ ಯಾರು ಬರಲ್ಲೊ ಮುನ್ನೆಚ್ಚರಿಕೆ ಕ್ರಮ ವಹಿಸಬೇಕಾಗಿತ್ತು. ನಮ್ಮಂತವರು ಎಷ್ಟೋ ಜನ ಇದ್ದಾರೆ. ಅವರ ಪರಿಸ್ಥಿತಿ ಹೇಗಿರುತ್ತೆ ಅಂತ ಯೋಚನೆ ಮಾಡಬೇಕು ಎಂದರು.

ಇನ್ನೊಂದೆರೆಡು ವರ್ಷಕ್ಕೆ ಓದು ಮುಗಿಯುತಿತ್ತು. ಕೆಲಸಕ್ಕೂ ಸಹ ಸೇರುತಿದ್ದ ಅವನು. ಬೆನ್ನೆಲುಬಾಗಿ ನಿಂತುಕೊಳ್ಳುತಿದ್ದ ಅವನು. ವಿದೇಶಕ್ಕೆ ಹೋಗೊ ಆಸೆ ಹೊಂದಿದ್ದ. ಅವಕಾಶ ಸಿಕ್ಕರೆ ಹೋಗು ಎಂದು ನಾನು ಹೇಳಿದ್ದೆ. ಅವನು ದುಡಿದ ಹಣ ಕೊಡದಿದ್ದರೇ ಬೇಡ. ಜೊತೆಯಲ್ಲಿ ಇದಿದ್ದರೇ ಸಾಕಾಗುತಿತ್ತು ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*