ತಿಪಟೂರು: ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘದ ತಾಲ್ಲೂಕು ಘಟಕದ ವತಿಯಿಂದ ಮಂಗಳವಾರ ಜುಲೈ 1ರಂದು ಮಧ್ಯಾಹ್ನ 1 ಗಂಟೆಗೆ ಕಲ್ಪತರ ಗ್ರಾಂಡ್ ಹೋಟೆಲ್ ನಲ್ಲಿ ಪತ್ರಿಕಾ ದಿನಾಚರಣೆ ಹಾಗೂ ವೈದ್ಯಕೀಯ ಮತ್ತು ಕಂದಾಯ ದಿನಾಚರಣೆ ಹಾಗೂ ಪತ್ರಿಕಾ ರಂಗದಲ್ಲಿ ಸೇವೆಗೈದ ಸಾಧಕರಿಗೆ ಅಭಿನಂದನೆ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಂದು ಹಿರಿಯ ಪತ್ರಕರ್ತರಾದ ಡಾ. ಭಾಸ್ಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕಾರ್ಯಕ್ರಮದಲ್ಲಿ ಶಂಕರಪ್ಪನವರು ನಿರೂಪಣೆ ಮಾಡಿ ಶುಭ ವಿಶ್ವಕರ್ಮ ಪ್ರಾರ್ಥನೆ ಮಾಡಲಿದ್ದು ಹಾಗೂ ಸಿಡಿ ಕೃಷ್ಣಮೂರ್ತಿ ಪ್ರಿಂಟ್ ಮೀಡಿಯಾ ಮತ್ತು ಸೋಶಿಯಲ್ ಮೀಡಿಯಾ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರು ಸ್ವಾಗತ ಅಧ್ಯಕ್ಷತೆ ವಹಿಸಲಿದ್ದು, ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸೋಮಶೇಖರ್ ಚೌಡೇಶ್ವರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಹಿರಿಯ ಪತ್ರಕರ್ತರು ವಹಿಸಿಕೊಂಡು. ಮುಖ್ಯ ಅತಿಥಿಗಳಾಗಿ ಡಾ. ಶಿಲ್ಪ ಸರ್ಕಾರಿ ಸಮುದಾಯ ಆರೋಗ್ಯ ಅಧಿಕಾರಿ, ಜಗನ್ನಾಥ್ ಗ್ರೇಡ್ 2 ತಹಸಿಲ್ದಾರ್, ಡಾಕ್ಟರ್ ರಕ್ಷಿತ್ ಸರ್ಕಾರಿ ಆಸ್ಪತ್ರೆ ವೈದ್ಯರು, ಸನ್ಮಾನಿತರಾದ ಬಾಬು ಖಾನ್ ಹಿರಿಯಪತ್ರಕರ್ತರು, ಮಹದೇವ್ ಪತ್ರಕರ್ತರು, ಮುಖ್ಯ ಗಣ್ಯ ಅಧಿತಿಗಳಾಗಿ ಕಾಂತರಾಜ್ ఏ LA 'K ಇಂಡಿಯಾ ರೈಲ್ವೆ ಯೂನಿಯನ್ ನ್ಯಾಷನಲ್ ಪ್ರಧಾನ ಕಾರ್ಯದರ್ಶಿ, ಲತಾ ಮಣಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷರು ತಿಪಟೂರು, ನಿಜಗುಣ ಗ್ರಾಂಡ್ ಹೋಟೆಲ್ ಮಾಲೀಕರು. ವಂದನಾರ್ಪಣೆಯನ್ನು ಸಂಘದ ಸರ್ವ ಸದಸ್ಯರು ಮಾಡಲಿದ್ದಾರೆ ಹಾಗೂ ತಾಲೂಕಿನ ಎಲ್ಲಾ ಪತ್ರಕರ್ತರು ಸಹ ಆಗಮಿಸಿ ಯಶಸ್ವಿಗೊಳಿಸಬೇಕೆಂದು ತಿಪಟೂರು ಘಟಕದ ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘದ ಸಂಘಟನಾ ಕಾರ್ಯದರ್ಶಿ ಮಂಜುನಾಥ್ 8. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್ ಪೋಸ್ಟ್ ಮಾಡಿ
0ಕಾಮೆಂಟ್‌ಗಳು
3/related/default



