ಕ್ಯಾಂಟರ್ – ಕಾರಿನ ನಡುವೆ ಡಿಕ್ಕಿ: ಒಂದೇ ಕುಟುಂಬದಲ್ಲಿ 4 ಸಾವು

ಭಾಸ್ಕರ ಪತ್ರಿಕೆ
0

ತುಮಕೂರು:  ಕ್ಯಾಂಟರ್ ಹಾಗೂ ಕಾರು ನಡುವೆ ಡಿಕ್ಕಿಯಾಗಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಬೆಂಗಳೂರು ಟು ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿರುವ ತುಮಕೂರು ಜಿಲ್ಲೆಯ ಕುಣಿಗಲ್ ಬೈಪಾಸ್ ನಲ್ಲಿ ನಡೆದಿದೆ.

ಮೃತರೆಲ್ಲರು ಮಾಗಡಿ ತಾಲೂಕಿನ ಮತ್ತಿಕೆರೆ ಗ್ರಾಮದವರಾಗಿದ್ದಾರೆ. ಸೀಬೆಗೌಡ, ಶೋಭಾ, ದುಂಬಿಶ್ರೀ, ಭಾನುಕಿರಣ್ ಗೌಡ ಮೃತ ದುರ್ದೈವಿಗಳು.  ಮಗನನ್ನ ಹಾಸ್ಟೆಲ್ ಗೆ ಬಿಟ್ಟು ಬರಲು ಹೋಗುತ್ತಿದ್ದ ವೇಳೆ ಅವಘಡ ಸಂಭವಿಸಿದೆ.

ರಾಮನಗರ ಜಿಲ್ಲೆ ಮಾಗಡಿ ಪಟ್ಟಣದಲ್ಲಿ ವಾಸವಿದ್ದ ಸಿಬೇಗೌಡ, ಕುಣಿಗಲ್ ಹೊರವಲಯದ ಬಿದನಗೆರೆ ಬಳಿಯಿರುವ ವ್ಯಾಲಿ ಸ್ಕೂಲ್ ನಲ್ಲಿ 8ನೇ ತರಗತಿ ಓದುತ್ತಿದ್ದ ಮಗನನ್ನು ಭಾನುವಾರ ರಜೆ ಹಿನ್ನೆಲೆ, ಮಾಗಡಿಗೆ ತೆರಳಿದ್ದ ಭಾನುಕಿರಣ್ ಗೌಡ, ನಿನ್ನೆ ಊಟ ಮುಗಿಸಿ ಮಗನನ್ನ ಶಾಲೆಯ ಹಾಸ್ಟೆಲ್ ಗೆ ಬಿಟ್ಟು ಬರಲು ಕುಟುಂಬ ಸಮೇತರಾಗಿ ಬಂದಿದ್ದರು.

ಈ ವೇಳೆ ಒನ್ ವೇ ಯಲ್ಲಿ ಬಂದ ಕ್ಯಾಂಟರ್ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಸಂಪೂರ್ಣ ನಜ್ಜುಗುಜ್ಜು ಆಗಿದೆ. ಸಿಬೇಗೌಡಗೆ ಒಟ್ಟು ಮೂವರು ಮಕ್ಕಳು ವರ್ಣಶ್ರೀ, ದುಂಬಿಶ್ರೀ, ಭಾನುಕಿರಣ್ ಗೌಡ, ವರ್ಣಶ್ರೀ ಬೆಂಗಳೂರಿನ ದಯಾನಂದ ಸಾಗರ ಕಾಲೇಜಿನಲ್ಲಿ ಓದುತ್ತಿದ್ದರು. ದುಂಬಿಶ್ರೀ, ಬೆಂಗಳೂರಿನ ಗ್ಲೋಬಲ್ ಕಾಲೇಜಿನಲ್ಲಿ ಓದುತ್ತಿದ್ದರು.

ನಿನ್ನೆ ಸಂಜೆ ದೊಡ್ಡ ಮಗಳು ವರ್ಣಶ್ರೀಯನ್ನ ಬೆಂಗಳೂರಿಗೆ ಕಳುಹಿಸಿಕೊಟ್ಟು, ಕಿರಿಯ ಮಗ ಭಾನುಕಿರಣ್ ನನ್ನ ಕುಣಿಗಲ್ ಬಳಿಯಿರುವ ವ್ಯಾಲಿ ಸ್ಕೂಲ್ ಹಾಸ್ಟೆಲ್ ಗೆ ಬಿಟ್ಟು ಬರಲು ಒಟ್ಟಿಗೆ ಕಾರಿನಲ್ಲಿ ಬರ್ತಿದ್ರು.

ಘಟನೆ ನಡೆದ ವೇಳೆ  ಸಿಬೇಗೌಡನೇ ಕಾರು ಚಾಲನೆ ಮಾಡಿಕೊಂಡು ಬರ್ತಿದ್ರು. ಕುಣಿಗಲ್ ಬೈಪಾಸ್ ಬಳಿ ಯುಟರ್ನ್ ತೆಗೆದುಕೊಳ್ಳುವ ವೇಳೆ ವೇಗವಾಗಿ ಬಂದ ಕ್ಯಾಂಟರ್ ಡಿಕ್ಕಿ ಹೊಡೆದಿದ್ದು, ನಾಲ್ವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*