ನಿವೃತ್ತಿ ಪ್ರಾಂಶುಪಾಲರಾದ ಎಚ್ ಬಿ ಕುಮಾರಸ್ವಾಮಿ ಅದ್ದೂರಿ ಬೀಳ್ಕೊಡುಗೆ ಸಮಾರಂಭ

ಭಾಸ್ಕರ ಪತ್ರಿಕೆ
0

ತಿಪಟೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಲ್ಲಿ ಅದ್ದೂರಿ ಬೀಳ್ಕೊಡುಗೆ ಸಮಾರಂಭ ಸಮಯ 10 ಗಂಟೆಗೆ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಸೆಮಿನಾರ್ ಹಾಲಿನಲ್ಲಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಪ್ರಾಧ್ಯಾಪಕರಾದ ರಾಘವೇಂದ್ರ ಚಾರಿ ವಹಿಸಿದ್ದರು.

 ಎಚ್ ಬಿ ಕುಮಾರಸ್ವಾಮಿ 33 ವರ್ಷ 17 ತಿಂಗಳು ವರ್ಷಗಳ ಕಾಲ ಪಾಂಶಪಾಲರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಹೆಚ್ ಬಿ ಕುಮಾರಸ್ವಾಮಿ ಅವರಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಅಧ್ಯಾಪಕರ ವರ್ಗ ಮತ್ತು ಕಾರ್ಯದರ್ಶಿಗಳಾದ ಶಿವಕುಮಾರ್ ರವರು  ಸನ್ಮಾನಿಸಿ ಬೀಳ್ಕೊಟ್ಟರು.

 ಪ್ರಾಂಶುಪಾಲರಾದ ಕುಮಾರಸ್ವಾಮಿ ಅವರು  ಜನನ ದಿನಾಂಕ 01/06/1965  ಗ್ರಾಮ ಹಟ್ಟಿಹಳ್ಳಿ. ದಂಡಿನ ಶಿವರ ಹೋಬಳಿ ತುರುವೇಕೆರೆ ತಾಲೂಕು ತುಮಕೂರು ಜಿಲ್ಲೆ,ತಂದೆ ಬಸಪ್ಪ ತಾಯಿ ಈರಮ್ಮ ದಂಪತಿಗಳ ಮಗನಾಗಿ ಜನಿಸಿದ್ದಾರೆ

 ಬಾಲ್ಯದ ಶಿಕ್ಷಣ ಬೀಚನಹಳ್ಳಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪಿಯುಸಿ ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜ್ ಹುಲ್ಲೇಕೆರೆ. 

ಪದವಿ ಶಿಕ್ಷಣ ತುಮಕೂರು ಕಲಾ ಕಾಲೇಜು ಬಿಎಡ್ ಶಿಕ್ಷಣ ಸರ್ಕಾರಿ ಮಹಾವಿದ್ಯಾಲಯ ಚಿತ್ರದುರ್ಗ ಇತಿಹಾಸದ ವಿಷಯದಲ್ಲಿ ಸ್ನಾತಕೋತ್ತರ  ಪದವಿಯನ್ನು ಜ್ಞಾನಭಾರತಿ ವಿಶ್ವವಿದ್ಯಾಲಯ ಬೆಂಗಳೂರು ಇಲ್ಲಿ ಫಸ್ಟ್ ರಾಂಕ್ ನೊಂದಿಗೆ ಚಿನ್ನದ ಪದಕ ಪಡೆದಿದ್ದು.

 Mphil ಪದವಿಯನ್ನು ವಿನಾಯಕ ವಿಶ್ವವಿದ್ಯಾಲಯ ಪಿ ಎಚ್ ಡಿ ಪದವಿಯನ್ನು ಸಿಎಂಜೆ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದು    26/ 12/ 1992 ರಲ್ಲಿ ಕಾಲೇಜು ಶಿಕ್ಷಣ ಇಲಾಖೆ ಯಲ್ಲಿ ಉದ್ಯೋಗಕ್ಕೆ ನೇಮಕಗೊಂಡಿದ್ದು

 ಗುಬ್ಬಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 1992 -98, 1998- 2004, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ತುರುವೇಕೆರೆ 2005-06   ಕೋಲಾರ ಬಾಲಕರ ಕಾಲೇಜ್ 2006- 07, ತುರುವೇಕೆರೆಯಲ್ಲಿ ಮತ್ತು 2007 2008 ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೊಣೆ ಕೆರೆಯಲ್ಲಿ ಪ್ರಾಂಶುಪಾಲರಾಗಿ 2009 ರಿಂದ 2024 ರವರೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ತಿಪಟೂರಿನಲ್ಲಿ ಸಹ ಪಾಂಶುಪಾಲರಿಗೆ ಕಾರ್ಯನಿರ್ವಹಿಸಿದ್ದು.

 2014ರಲ್ಲಿ 2017ರವರೆಗೆ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದು.

ಯುಜಿಸಿಯಿಂದ ಅನುದಾನ ಪಡೆದು ಮತ್ತು ರಾಷ್ಟ್ರೀಯ ವಿಚಾರ ಸಂಕೀರ್ಣಗಳನ್ನು ಎರಡು ರಾಜ್ಯ ಮಟ್ಟದ ವಿಚಾರ ಸಂಕೀರ್ಣಗಳನ್ನು ಏರ್ಪಡಿಸಿದ್ದು 2017 ರ ಸ್ವಂತ ಹಣಕಾಸಿನ ನೆರವಿನಿಂದ ಸಮಾಜಶಾಸ್ತ್ರ ವಿಭಾಗದಿಂದ ರಾಷ್ಟ್ರೀಯ ವಿಚಾರ ಸಂಕೀರ್ಣವನ್ನು ಏರ್ಪಡಿಸಿದ್ದು. 

2017ರಲ್ಲಿ ಕರ್ನಾಟಕ ಸಾಮಾನ್ಯ ಜ್ಞಾನ ಅಕಾಡೆಮಿಯಿಂದ ಉತ್ತಮ ಪ್ರಾಂಶುಪಾಲ  ಪ್ರಶಸ್ತಿ ಪಡೆದಿದ್ದು ಯುಜಿಸಿಯಿಂದ ಎರಡು ಕೋಟಿ ಅನುದಾನವನ್ನು ಪಡೆದುಕೊಂಡು ಕಾಲೇಜಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ.

 ಎಂದು ಉಪಸ್ಥಿತಿಯಲ್ಲಿದ್ದ  ಅಧ್ಯಾಪಕರುಗಳು ಅವರ ವೃತ್ತಿಯ ಬಗ್ಗೆ ಹಾಗೂ ಅವರ  ಸವಿನೆನಪುಗಳನ್ನ ಭಾಷಣದ ಮೂಲಕ ಹೊರ ಹಾಕಿದರು. ಕಾರ್ಯಕ್ರಮದಲ್ಲಿ ಎಲ್ಲಾ ಪ್ರಾಂಶುಪಾಲರು ಅಧ್ಯಾಪಕರು, ಬೋಧಕ ಬೋಧಕೇತರ ಸಿಬ್ಬಂದಿ, ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು ಹಳೆ ವಿದ್ಯಾರ್ಥಿಗಳು ಮತ್ತು ಕಾಲೇಜಿನ ಅಭಿವೃದ್ಧಿ ಸಮಸ್ಯೆ ಸಮಿತಿಯ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತಿಯಲ್ಲಿದ್ದರು.


 ಮಂಜುನಾಥ್ ಡಿ ತಿಪಟೂರು


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*