ಬೆಂಗಳೂರು: ಜೂನ್ 21; ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜದವತಿಯಿಂದ ರಾಜ್ಯ ಮಟ್ಟದ ವಿಶ್ವಕರ್ಮ ಸಮಾವೇಶ ಮತ್ತು ಎಸ್ ಎಸ್ ಎಲ್ ಸಿ,ಪಿಯುಸಿ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭ ಪುರಭವನದಲ್ಲಿ ನಡೆಯಿತು.
ವಿಶ್ವಕರ್ಮ ಸ್ವಾಮೀಜಿಗಳಾದ ನೀಲಕಂಠಾಚಾರ್,ಲೋಹಿಯಾ ವೇದಿಕೆಯ ಮಳವಳ್ಳಿ ಶಿವಣ್ಣ, ರಾಜ್ಯಾಧ್ಯಕ್ಷೆ ವಸಂತ ಮುರುಳಿ, ವಿಶ್ವಕರ್ಮ ಸಮುದಾಯದ ವಿವಿಧ ಸ್ವಾಮೀಜಿಗಳು ಕಾರ್ಯಕ್ರಮ ಉದ್ಘಾಟಿಸಿ,ಪ್ರತಿಭಾ ಪುರಸ್ಕಾರ ವಿತರಿಸಿದರು.
ವಿಶ್ವಕರ್ಮ ಸಮಾಜದ ವಿವಿಧ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಸ್ಥಾಪಕ ರಾಜ್ಯಾಧ್ಯಕ್ಷೆ ವಸಂತ ಮುರುಳಿ ಮಾತನಾಡಿ,ವಿಶ್ವಕರ್ಮ ಸಮಾಜದ ಸಂಘಟನೆ ಮತ್ತು ಉದ್ಧಾರ ವಿಚಾರದಲ್ಲಿ ಯಾವುದೇ ಅಡೆತಡೆಗಳು ಬಂದರೂ ಹೆದರದೆ ಕೆಚ್ಚದೆಯಿಂದ
ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
