ಆಡಿಯೋ ವೈರಲ್ ಬೆನ್ನಲ್ಲೇ ಬಿ.ಆರ್.ಪಾಟೀಲ್ ಗೆ ಸಿಎಂ ಸಿದ್ದರಾಮಯ್ಯ ಬುಲಾವ್

ಭಾಸ್ಕರ ಪತ್ರಿಕೆ
0

ಕಲಬುರಗಿ: ವಸತಿ ಇಲಾಖೆಯಲ್ಲಿ ಲಂಚದ ಆಡಿಯೋ ವೈರಲ್ ಆದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಶಾಸಕ ಬಿ.ಆರ್. ಪಾಟೀಲ್ ಗೆ ಬುಲಾವ್ ನೀಡಿದ್ದಾರೆ.

ಬಿ.ಆರ್.ಪಾಟೀಲ್‌ಗೆ ಖುದ್ದು ಫೋನ್ ಮಾಡಿದ ಸಿಎಂ ಸಿದ್ದರಾಮಯ್ಯ ಜೂ.25ರಂದು ಸಂಜೆ ಬೆಂಗಳೂರಿನಲ್ಲಿ ತನ್ನನ್ನು ಭೇಟಿಯಾಗುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ವಸತಿ ಇಲಾಖೆಯಲ್ಲಿನ ಲಂಚದ  ಆಡಿಯೋ ವೈರಲ್  ಪಕ್ಷಕ್ಕೆ ಮುಜುಗರವಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಬಿ.ಆರ್.ಪಾಟೀಲ್‌ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದು, ಈ ಆರೋಪದ ಬಗ್ಗೆ ವಿವರಣೆ ಕೇಳುವ ಸಾಧ್ಯತೆ ಇದೆ ಎನ್ನಲಾಗಿದೆ.

ವಸತಿ ಇಲಾಖೆ ಭ್ರಷ್ಟಾಚಾರ ಬಗ್ಗೆ ಮಾತನಾಡಿದ್ದ ಬಿ.ಆರ್ ಪಾಟೀಲ್ ಇದೀಗ ಮೈನಾರಿಟಿ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನ ಬಿಚ್ಚಿಟ್ಟಿದ್ದಾರೆ.  ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯನವರಿಗೆ ತೀವ್ರ ಮುಜುಗರ ಸನ್ನಿವೇಶವನ್ನು ಸೃಷ್ಟಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*