ಟ್ರಂಪ್ ಕದನ ವಿರಾಮ ಘೋಷಣೆಗೆ ಕ್ಯಾರೇ ಅನ್ನದ ಇರಾನ್: ಇಸ್ರೇಲ್ ಮೇಲೆ ಭೀಕರ ದಾಳಿ

ಭಾಸ್ಕರ ಪತ್ರಿಕೆ
0

ಇಸ್ರೇಲ್​ ಮತ್ತು ಇರಾನ್​ ಮಧ್ಯೆ ತಾತ್ಕಾಲಿಕ ಕದನ ವಿರಾಮವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದು, ಇದರ ಬೆನ್ನಲ್ಲೇ ಟ್ರಂಪ್ ಹೇಳಿಕೆಯನ್ನು ಲೆಕ್ಕಿಸದ ಇರಾನ್, ಇಸ್ರೆಲ್ ಮೇಲೆ ಭೀಕರ ದಾಳಿ ಮುಂದುವರಿಸಿದೆ.

ಟೆಲ್ ಅವೀವ್ ಹೊರತುಪಡಿಸಿ, ಬೀರ್ ಶೀವಾ ಮೇಲೆ ಇರಾನ್ ಕ್ಷಿಪಣಿಗಳ ದಾಳಿ ಮಾಡಿದ್ದು, ಪರಿಣಾಮ ಮೂವರು ಸಾವನ್ನಪ್ಪಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ಇಸ್ರೇಲ್​ ಮತ್ತು ಇರಾನ್​ ಮಧ್ಯೆ ತಾತ್ಕಾಲಿಕ ಕದನ ವಿರಾಮವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಕೆಲವೇ ನಿಮಿಷಗಳ ನಂತರ ಈ ದಾಳಿ ನಡೆದಿದೆ.

ಇಸ್ರೇಲ್​ ಮೇಲೆ ಸೀಮಿತ ಸಂಖ್ಯೆಯ ಕ್ಷಿಪಣಿಗಳೊಂದಿಗೆ ಇರಾನ್ ದಾಳಿ ನಡೆಸಿದ್ದು, ಇಸ್ರೇಲ್ ಪ್ರಸ್ತುತ ಇರಾನಿನ ಕ್ಷಿಪಣಿಗಳನ್ನು ತಡೆಹಿಡಿಯುತ್ತಿದೆ. ಟೆಲ್ ಅವೀವ್‌ ನಲ್ಲಿಯೂ ಸ್ಫೋಟಗಳ ಶಬ್ದ ಕೇಳಿಬರುತ್ತಿದೆ ಎಂದು ವರದಿಗಳು ತಿಳಿಸಿವೆ.

ಇಸ್ರೇಲ್ ಮತ್ತು ಇರಾನ್ ಸಂಪೂರ್ಣ ಕದನ ವಿರಾಮ ಒಪ್ಪಂದಕ್ಕೆ ಬಂದಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದು, ಇದರ ಬೆನ್ನಲ್ಲೇ ಇರಾನ್, ಇಸ್ರೇಲ್ ಮೇಲೆ ದಾಳಿ ನಡೆಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*