
ತಿಪಟೂರು: ನಗರದ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತ (ಹಾಸನ ಸರ್ಕಲ್) ಬಳಿಯಿರುವ ಭಾಸ್ಕರ ಪತ್ರಿಕೆ ಕಚೇರಿಯಲ್ಲಿ ನಡೆದ ಭಾರತೀಯ ಜನಸಂಘ ಸ್ಥಾಪಕ ಡಾ.ಶ್ಯಾಮ್‌ಪ್ರಸಾದ್ ಮುಖರ್ಜಿಯವರ 70ನೇ ವಾರ್ಷಿಕ ಪುಣ್ಯ ಸ್ಮರಣೆಯನ್ನು ತಾಲ್ಲೂಕು ಭಾರತೀಯ ಜನತಾ ಪಕ್ಷದ ಮುಖಂಡರು ಮತ್ತು ಹಿರಿಯ ಪತ್ರಕರ್ತರಾದ ಡಾ. ಭಾಸ್ಕರ್ ಅವರ ನೇತೃತ್ವದಲ್ಲಿ ನಡೆಯಿತು.

ಇದೇ ರೀತಿ ಮಾಜಿ ಸಚಿವ ಬಿ.ಸಿ.ನಾಗೇಶ್ ಅವರ ಸ್ವಗೃಹದಲ್ಲಿ ನಡೆದ ಭಾರತೀಯ ಜನಸಂಘ ಸ್ಥಾಪಕ ಡಾ.ಶ್ಯಾಮ್‌ಪ್ರಸಾದ್ ಮುಖರ್ಜಿಯವರ 70ನೆ ವಾರ್ಷಿಕ ಪುಣ್ಯ ಸ್ಮರಣೆಯಲ್ಲಿ ಮಾಜಿ ಸಚಿವ ಬಿ.ಸಿ.ನಾಗೇಶ್ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗರಾಜು, ತಾ. ಅಧ್ಯಕ್ಷ ಸುರೇಶ್ ಬಳ್ಳೇಕಟ್ಟೆ, ನಗರ ಅಧ್ಯಕ್ಷ ಗುಲಾಬಿ ಸುರೇಶ್, ಪ್ರಸನ್ನಕುಮಾರ್, ಲೋಕೇಶ್, ನಗರಸಭಾ ಸದಸ್ಯ ರಾಮ್‌ಮೋಹನ್, ಸಂಧ್ಯಾ ಕಿರಣ್, ಪದ್ಮತಿಮ್ಮೆಗೌಡ, ಜಯಲಕ್ಷ್ಮಿ, ಶಶಿಕಿರಣ್, ಕಾರ್ಯಕರ್ತರಿದ್ದರು.
