ತಿಪಟೂರು: ನೊಣವಿನಕೆರೆ ಸೋಮೆಕಟ್ಟೆ ಶ್ರೀಕಾಡಸಿದ್ದೇಶ್ವ ಮಠದ ಹೆಸರಿನಲ್ಲಿ ರಾಜ್ಯದ ವಿವಿದಡೆ ಕೆಲವು ಅನಾಮದೇಯ ಕಾವಿಧಾರಿಗಳು,ನಾವು ಶ್ರೀಮಠದ ಉತ್ತರಾಧಿಕಾರಿಗಳು ಎಂಬುದಾಗಿಯೂ ಹಾಗೂ ಮಠದಲ್ಲಿ ಪೂಜೆಸಲ್ಲಿಸುವುದ್ದಾಗಿ ಭಕ್ತರನ್ನ ವಂಚನೆ ಮಾಡುತ್ತಿರುವುದು ಶ್ರೀಮಠದ ಗಮನಕ್ಕೆ ಬಂದಿದೆ ಬಗ್ಗೆ ಶ್ರೀ ನೊಣವಿನಕೆರೆ ಕಾಡ ಸಿದ್ದೇಶ್ವರ ಮಠಕ್ಕೆ ವಿಷಾದ ವ್ಯಕ್ತಪಡಿಸಿದ್ದು,ಮಠದ ಹೆಸರಿನಲ್ಲಿ ಬರುವ ನಕಲಿ ಕಾವಿಧಾರಿಗಳ ಬಗ್ಗೆ ಭಕ್ತರು ಎಚ್ಚರಿಕೆಯಿಂದ ಇರಬೇಕು.ಮಠಕ್ಕೆ ಕಳಂಕ ತರುವವರಿಗೆ ದಂಡನೆ ನೀಡಬೇಕು. ನೊಣವಿನಕೆರೆ ಶ್ರೀಕಾಡಸಿದ್ದೇಶ್ವರ ಮಠಕ್ಕೆ ಭಕ್ತರೇ ಶ್ರೀರಕ್ಷೆಯಾಗಿದ್ದಾರೆ ಸಾಮಾನ್ಯ ಭಕ್ತನು ಹೃದಯವಂತ, ಆರೋಗ್ಯವಂತ, ಸುಖಿ ಕುಟುಂಬಿಯಾಗಿ ಬಾಳಲಿ ಎಂದು ಆಶೀರ್ವಾದ ನೀಡುತ್ತೇವೆ, ನಮ್ಮ ಮಠದಿಂದ ಯಾರು ಸಹ ಪೂಜೆ ಪುನಸ್ಕಾರಗಳ ಹೆಸರಿನಲ್ಲಿ ಎಲ್ಲಿಯೂ ಹಣ ವಸೂಲಿ ಮಾಡುತ್ತಿಲ್ಲ ಇತ್ತೀಚೆಗೆ ಬೆಂಗಳೂರು, ಹಾವೇರಿ, ಕಡೂರು ಭಾಗದ ಸುತ್ತಮುತ್ತ ಹಳ್ಳಿಗಳಲ್ಲಿ ನಮ್ಮ ಶ್ರೀಮಠದ ಭಕ್ತರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬುದು ಬೆಳಕಿಗೆ ಬಂದಿದೆ ಕಪಟಿ, ಸ್ವಯಂಘೋಷಿತ ನಕಲಿ ಕಾವಿಧಾರಿಗಳ ಮೋಸದ ಮಾತಿಗೆ ಮರುಳಾಗಬೇಡಿ ಎಂದು ನೊಣವಿನಕೆರೆ ಸೋಮೆಕಟ್ಟೆ ಶ್ರೀಕಾಡಸಿದ್ದೇಶ್ವರ ಮಠದ ಪೀಠಾಧ್ಯಕ್ಷರಾದ ಶ್ರೀಶ್ರೀ ಡಾ.ಕರಿವೃಷಬಕೇಶಿಕೇಂದ್ರ ಶಿವಯೋಗಿಶ್ವರಸ್ವಾಮೀಜಿ ತಿಳಿಸಿದರು.
ಕಿರಿಯ ಶ್ರೀಗಳಾದ ಅಭಿನವ ಕಾಡ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ ಶ್ರೀ ಮಠದ ಹೆಸರಿನಲ್ಲಿ ಯಾವುದೇ ಶಾಖಾ ಮಠಗಳಾಗಲಿ, ಅಥವಾ ಬೇರೆ ಯಾರಿಗೂ ಪಟ್ಟಾಧಿಕಾರ ನೀಡಿರುವುದಿಲ್ಲ, ಶ್ರೀ ಮಠದ ಹೆಸರಿನಲ್ಲಿ ಎಲ್ಲಿಯೂ ಹಣ ವಸೂಲಿಗೆ ನಮ್ಮ ಮಠದ ವತಿಯಿಂದ ಯಾರನ್ನು ನೇಮಿಸಿಲ್ಲ ಅಭಿವೃದ್ಧಿ ಕಾರ್ಯಗಳು ಶ್ರೀಮಠದ ಭಕ್ತರ ಸಮ್ಮುಖದಲ್ಲಿಯೇ ನಡೆಯುತ್ತಿವೆ, ಇಂಥವರ ವಿರುದ್ಧ ಈಗಾಗಲೇ ಭಕ್ತರು ಸ್ಥಳೀಯ ಪೊಲೀಸ್ ಠಾಣೆಗಳಿಗೆ ದೂರು ದಾಖಲಿಸಿದ್ದಾರೆ ಶ್ರೀ ಮಠದ ಭಕ್ತರು ಮಠಕ್ಕೆ ಆಗಮಿಸಿ ತಮ್ಮ ಭಕ್ತಿ ನೀಡುವದಿದ್ದರೆ ನೀಡಬಹುದು ಎಂದು ಹೇಳಿದರು.

