ಶ್ರೀಮತಿ ಲತಾಮಣಿ ಎಂ. ಕೆ ರವರಿಗೆ KERA ತಿಪಟೂರು ತಾಲ್ಲೂ ಘಟಕದ ವತಿಯಿಂದ ಅಭಿನಂದನೆಗಳು

ಭಾಸ್ಕರ ಪತ್ರಿಕೆ
0

ಶ್ರೀಮತಿ ಲತಾಮಣಿ ಎಂ. ಕೆ

ಶ್ರೀಮತಿ ಲತಾಮಣಿ ಎಂ. ಕೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನವರು. ವೃತ್ತಿಯಲ್ಲಿ ಖಾಸಗಿ ಶಾಲಾ ಶಿಕ್ಷಕಿ. ಓದು: ಬಿ.ಎ, ಬಿ.ಎಡ್. ತಂದೆ: ಈ.ಕೃಷ್ಣಯ್ಯ, ಪತಿ: ಜಯರಾಮ. ಮಗ: ಹರ್ಷ, ಮಗಳು: ಕುಸುಮ.

ಸಾಹಿತ್ಯ ಸಾಧನೆ:

ಕಳೆದ ಐದು ವರ್ಷಗಳಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದು ಸಾಹಿತ್ಯ ಸಂಘಟನೆಗಳಲ್ಲಿ ಕ್ರಿಯಾಶೀಲ ರಾಗಿದ್ದಾರೆ. ಈವರೆಗೆ ವಸಂತಗಾನ ಕವನ ಸಂಕಲನ, ಸೂಜಿಗಣ್ಣು ಕಾವ್ಯ ವಿಮರ್ಶೆ, ಅಕ್ಷಿಯೊಳಗೊಂದಕ್ಷಿ ವಚನಗಳ ವಿಮರ್ಶೆ, ಸಮಾಜದೊಡವೆಗಳು ಲೇಖನಗಳು, ಜೀವನ ಮೌಲ್ಯ ಮತ್ತು ಪರುಷಮಣಿ ಸಂಪಾದಿತ ಕೃತಿಗಳು, ಬೀಜದೊಡಲು ಷಟ್ಟದಿ ಸಂಕಲನ ಸೇರಿದಂತೆ ಒಟ್ಟು 8 ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಪ್ರಸ್ತುತ ವಾರ್ಧಕ ಷಟ್ನದಿಯಲ್ಲಿ ಮಹಾಕಾವ್ಯ ಬರೆಯುತ್ತಿರುವ ಇವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ನಡೆಸಿದ್ದಾರೆ, ಸದ್ಯ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಿಪಟೂರು ತಾಲೂಕು ಘಟಕದ ಅಧ್ಯಕ್ಷರಾಗಿ ಸಂಘಟನೆಯಲ್ಲಿ ತೊಡಗಿದ್ದಾರೆ.
ನಿರೂಪಣೆ, ಕಲೆ, ಸಾಹಿತ್ಯ, ಸಂಗೀತ, ನಟನೆ, ಚಿತ್ರಕಲೆ, ಗೈಡ್ ಇವು ಇವರ ಇತರ ಆಸಕ್ತಿಗಳು.

ಸಾಂಸ್ಥಿಕ ಚಟುವಟಿಕೆಗಳು: 

ಮಾಜಿ ಅಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ತುರುವೇಕೆರೆ ತಾಲ್ಲೂಕು ಘಟಕ.
ಅಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಿಪಟೂರು
ತಾಲ್ಲೂಕು ಘಟಕ.

ಪ್ರಶಸ್ತಿ-ಪುರಸ್ಕಾರಗಳು: 

  • ಕರ್ನಾಟಕ ಶಿರೋ ಮಣಿ ರಾಜ್ಯ ಪ್ರಶಸ್ತಿ2025
  • ತಿರುಮಲಾಂಬ ರಾಷ್ಟ್ರೀಯ ಸಾಹಿತ್ಯ ಪುರಸ್ಕಾರ 2025
  • ಶರಣ ಸಂಕುಲ ರತ್ನ ರಾಷ್ಟ್ರೀಯ ಪ್ರಶಸ್ತಿ 2025 ರಾಜ್ಯ ಮಟ್ಟದ ಮಹಾನಾಯಕ ಕಾವ್ಯ ಪ್ರಶಸ್ತಿ 2021
  • ಡಾ. ನಾ. ಡಿಸೋಜಾ ಸಾಹಿತ್ಯ ಪುರಸ್ಕಾರ 2021 ರಾಜ್ಯ ಮಟ್ಟದ ರಾಘವಾಂಕ ಕಾವ್ಯ ಪುರಸ್ಕಾರ 2021
  • ರಾಜ್ಯ ಮಟ್ಟದ ಪ್ರತಿಭಾ ಮಾಣಿಕ್ಯ ಪ್ರಶಸ್ತಿ
  • ಕರ್ನಾಟಕ ಸರ್ಕಾರದ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ
ಸೇರಿದಂತೆ ಇನ್ನೂ ಹಲವಾರು ಪ್ರಶಸ್ತಿಗಳು ಸಂದಿವೆ.ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಇವರಿಗೆ ಹೆಚ್ಚಿನ ಪ್ರಗತಿ ಯಾಗಲಿ ಎಂದು ತಿಪಟೂರು ಕರ್ನಾಟಕ ಸಂಪದಕರು ಮತ್ತು ವರದಿಗಾರರ ಸಂಘದ ವತಿಯಿಂದ ಶುಭ ಹಾರೈಕೆಗಳು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*