ಧಾರವಾಡ: ತುರ್ತು ಪರಿಸ್ಥಿತಿಗಿಂತ ಕೆಟ್ಟ ಪರಿಸ್ಥಿತಿಯಲ್ಲಿ ಇವತ್ತು ದೇಶವಿದೆ. ಆ ಬಗ್ಗೆ ಬಿಜೆಪಿಯವರು ಚರ್ಚೆ ಮಾಡ್ತಾರಾ? ಎಂದು ಸಚಿವ ಸಂತೋಷ್ ಲಾಡ್ ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.
ತುರ್ತು ಪರಿಸ್ಥಿತಿಯ ಬಗ್ಗೆ ಬಿಜೆಪಿ ಚರ್ಚೆ ವಿಚಾರವಾಗಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪಹಲ್ಗಾಮ್, ಪುಲ್ವಾಮಾ ದಾಳಿ ಕುರಿತು ಕೇಳಬಾರದು ಎಂದು ಅವರು ಇಂಥ ಅಭಿಯಾನಗಳನ್ನು ತರುತ್ತಿದ್ದಾರೆ. ವಿಷಯಾಧಾರಿತ ಸಮಸ್ಯೆಗಳು ಜನರಿಗೆ ಗೊತ್ತಾಗಬಾರದೆಂಬುದು ಇವರ ಉದ್ದೇಶ ಎಂದು ಟೀಕಿಸಿದರು.
ಇವರ ಪ್ರಕಾರ ನಮ್ಮನ್ನು ಯಾವುದೇ ಬೇರೆ ದೇಶಕ್ಕೆ ಹೋಲಿಸಿ ನೋಡುವಂತಿಲ್ಲ. ಬೇರೆ ರಾಜ್ಯಕ್ಕೂ ಹೋಲಿಸಿ ನೋಡುವಂತಿಲ್ಲ. ನಮ್ಮ ದೇಶವೇ ಗ್ರೇಟ್, ನಮ್ಮ ಪ್ರಧಾನಿಯೇ ಗ್ರೇಟ್. ತುರ್ತು ಪರಿಸ್ಥಿತಿ ಈಗ ಪ್ರಸ್ತುತವೇ? ಚರ್ಚಿಸುವ ವಿಷಯವೇ? ಎಂದು ಅವರು ಕೇಳಿದರು.
ಇದೇ ವೇಳೆ, ಈ ಬಾರಿಯ ದಸರಾವನ್ನು ಹೊಸ ಸಿಎಂ ಉದ್ಘಾಟನೆ ಮಾಡಲಿದ್ದಾರೆ ಎಂಬ ಆರ್.ಅಶೋಕ್ ಹೇಳಿಕೆಗೆ, ಯಾರು ಸಿಎಂ ಆಗ್ತಾರೆ ಅಂತ ಅಶೋಕ್ ಅವರನ್ನೇ ಕೇಳಬೇಕು ಎಂದರು.

