ಚಾಲಕನ ನಿಯಂತ್ರಣತಪ್ಪಿ ರಸ್ತೆ ಬದಿ ಮನೆಗೆ ನುಗ್ಗಿದ ಕೆ‌ಎಸ್.ಆರ್.ಟಿ.ಸಿ ಬಸ್ 35ಜನ ಪ್ರಯಾಣಿಕರಿಗೆ ತೀವ್ರಗಾಯ.ಆಸ್ಪತ್ರೆಗೆ ದಾಖಲು.

ಭಾಸ್ಕರ ಪತ್ರಿಕೆ
0

 


ತಿಪಟೂರು: ತಾಲ್ಲೂಕಿನ ಕಸಬಾ ಹೋಬಳಿ ಕೋನೆಹಳ್ಳಿ ಸಿದ್ದಾಪುರ ಗ್ರಾಮದ ಬಳಿ ಬಸ್ ಚಾಲಕನ ನಿಯಂತ್ರಣತಪ್ಪಿದ ಕೆ.ಆರ್.ಟಿ ಸಿ ಬಸ್ ರಸ್ತೆ ಪಕ್ಕದ ಮನೆಗೆ ನುಗ್ಗಿದ ಘಟನೆ ನಡೆದಿದ್ದು ಅಪಘಾತದಲ್ಲಿ ಸುಮಾರು 35ಜನರಿಗೆ ತೀವ್ರಗಾಯಗಾಳಾಗಿದ್ದು ಚಿಕಿತ್ಸೆಗಾಗಿ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.









ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಟ್ಟಿದ ಕೆ.ಎಸ್ ಆರ್.ಟಿ ಸಿ ಬಸ್ ಕೆಎ 57 ಎಫ್ 2826 ತಿಪಟೂರು ತಾಲ್ಲೋಕಿನ ಕೊನೇಹಳ್ಳಿ ಸಿದ್ದಾಪುರ ಗ್ರಾಮದ ಬಳಿ ಬಸ್ ಟೈಯರ್ ಬರಸ್ಟ್ ಆಗಿದ್ದು,ಚಾಲಕನ ನಿಯಂತ್ರಣ ಕಳೆದು ಕೊಂಡು ರಸ್ತೆ ಬದಿಯ ಮನೆಗೆ ನುಗಿದೆ. ಬಸ್ ನಿಯಂತ್ರಣ ತಪ್ಪಿ ವೇಗವಾಗಿ ರಸ್ತೆ ಬದಿಯ ವಿದ್ಯುತ್ ಕಂಬ .ತೆಂಗಿನ ಮರಕ್ಕೆ ಡಿಕ್ಕಿ ಹೊಡೆದು ರಸ್ತೆ ಬದಿಯ ಪುಟ್ಟಣ್ಣ ಎಂಬುವವರ ಮನೆಗೆ ನುಗ್ಗಿದೆ.ಅಪಘಾತದಲ್ಲಿ ಮಹಿಳೆಯರು ಮಕ್ಕಳು ಸೇರಿ 35ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು ಗಾಯಾಳುಗಳನ್ನ ತಿಪಟೂರು ಸಾರ್ವಜನಿಕ ಆಸ್ಪತ್ರೆ ಹಾಗೂ ಅರಸೀಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು.

ಹೊನ್ನವಳ್ಳಿ ಸಬ್ ಇನ್ಪೆಕ್ಟರ್ ರಾಜೇಶ್ .ಗ್ರಾಮಾಂತರ ವೃತ್ತ ನಿರೀಕ್ಷಕರಾದ ಚಂದ್ರಶೇಖರ್.ಡಿವೈಎಸ್ಪಿ ವಿನಾಯಕ ಶೆಟಿಗೇರಿ.ಸೇರಿದಂತೆ ಕೆಎಸ್ಆರ್ಟಿಸಿ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶಿಲನೆ ನಡೆಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*