ಕುಕನೂರ: ಮಂಗಳೂರು ಗ್ರಾಮ ಪಂಚಾಯತಿ ರ್ಯಾವಣಕಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಮ್ ಪಾಂಡೆ ಭೇಟಿ ನೀಡಿ ಮೂಲಭೂತ ಸೌಕರ್ಯ ಕಲ್ಪಿಸಲು ಪಿ.ಡಿ.ಓ ರವರಿಗೆ ಸೂಚನೆ ಕುಕನೂರ ತಾಲೂಕಿನ ಮಂಗಳೂರು ಗ್ರಾಮ ಪಂಚಾಯತಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಳಾದ ರಾಹುಲ್ ರತ್ನಮ್ ಪಾಂಡೆ ಭೇಟಿ. ರ್ಯಾವಣಕಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಆಟದ ಮೈದಾನ, ಕಂಪೌಂಡ್, ಅಡುಗೆ ಕೋಣೆ ಗಳನ್ನು ಶೀರ್ಘವಾಗಿ ಮಾಡಲು ಪಿ.ಡಿ.ಓ ರವರಿಗೆ ಸೂಚನೆ ನೀಡಿದರು.
ಮಂಗಳೂರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ಬಿಸಿಯೂಟ ಕಾರ್ಯಕ್ರಮ ಸಮರ್ಪಕವಾಗಿ ಜಾರಿಗೊಳಿಸಲು ಎಸ್.ಡಿ.ಎಮ್.ಸಿ ಸದಸ್ಯರ ಪಾತ್ರ ಮಹತ್ವವಾಗಿದೆ. ಮಕ್ಕಳ ಹಾಜರಾತಿ ಹೆಚ್ಚಿಸುವುದು, ಪಾಲಕರ ಸಭೆಗಳು, ಮಕ್ಕಳ ಗ್ರಾಮ ಸಭೆಗಳು ಸರಿಯಾಗಿ ಜರುಗಬೇಕು ಎಂದರು. ನಂತರ ಮಕ್ಕಳೊಂದಿಗೆ ಕುಳಿತು ಬಿಸಿಯೂಟ ಸೇವಿಸಿದರು.
ವಸತಿ ಯೋಜನೆಯಡಿ ಪ್ರಾರಂಭಗೊಂಡ ಮನೆಗಳು, JJM ಕಾಮಗಾರಿಗಳು, ಬಸ್ ಸ್ಟ್ಯಾಂಡ್ ಗಳನ್ನು ವೀಕ್ಷಣೆ ಮಾಡಿದರು.
ಸ್ಥಳದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷ ಬಿರಾದರ್ ಪಾಟೀಲ್, ಬಿ.ಇ.ಯೋ ರವರು, ಗ್ರಾಮೀಣ ಕುಡಿಯೋ ನೀರು ಕಾರ್ಯಪಾಲಕ ಎ.ಇ.ಇ ರಿಜವಾನ್, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ನೀಲಂ ಚಳಗೇರಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸಕ್ರಪ್ಪ ಚಿನ್ನೂರ, ಗ್ರಾಮ ಪಂಚಾಯತಿ ಉಪಾಧ್ಯಕ್ಷರು, ಸದಸ್ಯರು, ಶಾಲಾ ಶಿಕದಷಕರು ಗ್ರಾಮಸ್ಥರು ಹಾಜರಿದ್ದರು.
ಕಾಮೆಂಟ್ ಪೋಸ್ಟ್ ಮಾಡಿ
0ಕಾಮೆಂಟ್‌ಗಳು
3/related/default

