ಕೃಷಿ ಸಾಹಿತ್ಯ ಸಮ್ಮೇಳನದ ಕೃಷಿ ವಿಚಾರ ಸಂಕೀರ್ಣ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ರೈತರ ಕಡೆಗಣನೆ

ಭಾಸ್ಕರ ಪತ್ರಿಕೆ
0



ತಿಪಟೂರು: ಕೃಷಿ ಸಾಹಿತ್ಯ ಸಮ್ಮೇಳನದ ಕೃಷಿ ವಿಚಾರ ಸಂಕೀರ್ಣ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಶಿಕ್ಷಕರು, ಪತ್ರಕರ್ತರು, ರೈತರ ಕೆಲವೇ ವ್ಯಕ್ತಿಗಳ  ಹೆಸರುಗಳನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕಿದ್ದು, ಆಹ್ವಾನ  ಪತ್ರಿಕೆಯನ್ನು ಬೇಕಾಬಿಟ್ಟಿ ಮಾಡಿ ಬರೀ ಪ್ರಚಾರಕ್ಕೋಸ್ಕರ ಸೀಮಿತಗೊಳಿಸಿ  ನಿಜವಾದ ಸಾದಕ/ಕಿಯರು, ರೈತಮಹಿಳೆಯರು, ರೈತಪ್ರಶಸ್ತಿ ಪುರಸ್ಕೃತರು, ರೈತರು, ಕಾರ್ಮಿಕರು,ಪತ್ರಕರ್ತರು, ಅತಿ ಸಣ್ಣ ರೈತರು,ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಜ್ಞಾನಿಗಳು ಕೃಷಿ ಪ್ರಶಸ್ತಿ ಪುರಸ್ಕೃತರು, ಶಿಕ್ಷಕರವರೆಗೂ ಸಹ ಅಸಮಾಧಾನವಾಗಿದ್ದು. ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ನಾಮಕಾವಸ್ತಿಗೆ ಮಾಡಿಸಿದ್ದು ಎದ್ದು ಕಾಣುತ್ತಿದೆ ಹಾಗಾಗಿ  ಸಂಪಾದಕರು ಹಾಗೂ ವರದಿಗಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷರಾದ ಟಿ. ರಾಜು ಬೆಣ್ಣೇನಹಳ್ಳಿ, ತುಮಕೂರು ಜಿಲ್ಲಾ ಗೌರವಾಧ್ಯಕ್ಷರು ಹಾಗೂ ಹಿರಿಯ ಪತ್ರಕರ್ತರು  ಡಾ. ಭಾಸ್ಕರ ಚಾರ್ ತೀವ್ರವಾಗಿ ಕಳವಳ ವ್ಯಕ್ತಪಡಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*