ಅದೇ ಕೊನೆಯ ಸೆಲ್ಫಿಯಾಗಿತ್ತು: ವಿಮಾನದೊಳಗಿದ್ದವರ ಪ್ರಾಣದ ಜೊತೆಗೆ ಕನಸುಗಳೂ ಸುಟ್ಟು ಭಸ್ಮವಾಗಿತ್ತು!

ಭಾಸ್ಕರ ಪತ್ರಿಕೆ
0

ಅಹಮದಾಬಾದ್‌: ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಏರ್ ಇಂಡಿಯಾ ವಿಮಾನ ಅಹಮದಾಬಾದ್‌ನ ಮೇಘನಿನಗರ ಪ್ರದೇಶದ ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿ ಸುಟ್ಟು ಕರಕಲಾಗಿದೆ. ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರ ಪೈಕಿ ಒಬ್ಬ ಮಾತ್ರವೇ ಜೀವಂತವಾಗಿ ಹೊರ ಬರಲು ಸಾಧ್ಯವಾಯಿತು.

ಈ ವಿಮಾನದಲ್ಲಿದ್ದ 242 ಪ್ರಯಾಣಿಕ ಪೈಕಿ ರಾಜಸ್ಥಾನದ ಬನ್ಸ್ವಾರಾದ ದಂಪತಿ ಹಾಗೂ ಮೂವರು ಮಕ್ಕಳು ಕೂಡ ಇದ್ದರು. ವಿಮಾನ ಹೊರಡುವುದಕ್ಕೂ ಮುನ್ನ ಖುಷಿ ಖುಷಿಯಿಂದ ಕುಟುಂಬದೊಂದಿಗೆ ಸೆಲ್ಫಿ ಪಡೆದುಕೊಂಡಿದ್ದರು. ಆದರೆ ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಎಲ್ಲವೂ ಬದಲಾಗಿದೆ. ಅದೇ ಕೊನೆಯ ಸೆಲ್ಫಿಯಾಗಿದೆ.

ಬನ್ಸ್ವಾರಾದ ಮೃತರನ್ನು ಪ್ರತೀಕ್ ಜೋಶಿ, ಅವರ ಪತ್ನಿ ಕೋಮಿ ವ್ಯಾಸ್, ಅವರ ಅವಳಿ ಪುತ್ರರಾದ ಪ್ರದ್ಯುತ್ ಮತ್ತು ನಕುಲ್ ಮತ್ತು ಅವರ ಹಿರಿಯ ಮಗಳು ಮಿರಾಯಾ ಎಂದು ಗುರುತಿಸಲಾಗಿದೆ. ಇವರು ತಮ್ಮ ಕುಟುಂಬದೊಂದಿಗೆ ಲಂಡನ್ ಗೆ ಪ್ರಯಾಣಿಸುತ್ತಿದ್ದರು.

ಬೋಯಿಂಗ್ ವಿಮಾನವು ಗಾಳಿಯಲ್ಲಿ ಅಸ್ಥಿರವಾಗಿ ಕಾಣಿಸಿಕೊಂಡು ವೇಗವಾಗಿ ಕುಸಿದು, ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಅಪ್ಪಳಿಸಿತು ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ. ಇದು ಭಾರತದ ಇತಿಹಾಸದಲ್ಲಿ ಅತ್ಯಂತ ಮಾರಕ ವಾಯುಯಾನ ವಿಪತ್ತುಗಳಲ್ಲಿ ಒಂದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*