ಕಾಫಿನಾಡಿನಲ್ಲಿ “ಹಾಲು ಕದಿಯುವ ಗೋವು”: ಸಿಸಿಟಿವಿಯಲ್ಲಿ ಕಳ್ಳತನ ಬಯಲು!

ಭಾಸ್ಕರ ಪತ್ರಿಕೆ
0

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಗ್ರಾಮದಲ್ಲಿ ಏಳು ಕಂಡವರನ್ನು ನಂಬಲಾರದ ವಿಚಿತ್ರ ಘಟನೆ ನಡೆದಿದೆ. ಇಲ್ಲಿನ ವಿಕ್ರಂ ಎಂಬುವವರ ಅಂಗಡಿಯಲ್ಲಿ ಪ್ರತಿದಿನ 10 ರಿಂದ 20 ಲೀಟರ್ ಹಾಲು ಕಳೆಯಲ್ಪಡುತ್ತಿತ್ತು. ಅಂಗಡಿ ಮುಂದೆ ಹಾಲಿನ ವಾಹನವು ಹಾಲಿನ ಟ್ರೇ ಇಳಿಸಿ ಹೋಗುತ್ತಿದ್ದ ಕೂಡಲೇ ಹಸು ಸ್ಥಳಕ್ಕೆ ಬಂದು ಹಾಲು ಕುಡಿಯುತ್ತಿತ್ತಂತೆ!

ಹಾಲಿನ ಪ್ಯಾಕೆಟ್‌ ಗಳು ಕೂಡ ಅಲ್ಲಿಗೆ ಇರುವುದಿಲ್ಲದ ಹಿನ್ನೆಲೆಯಲ್ಲಿ ವಿಕ್ರಂ ಮೊದಲಿಗೆ ಇದು ಮಾನವ ಕಳ್ಳತನವೆಂದು ಶಂಕಿಸಿದ್ದರು. ಆದರೆ ಕಳೆದ ರಾತ್ರಿ 20 ಲೀಟರ್ ಹಾಲು ಕುಡಿದಿರುವುದಕ್ಕೆ ಸೇರ್ಪಡೆಯಾಗಿ, ಪ್ಲಾಸ್ಟಿಕ್ ಹಾಲಿನ ಕವರ್‌ ಗಳೂ ಕಾಣೆಯಾಗಿದ್ದವು.

ಈ ಹಿನ್ನೆಲೆಯಲ್ಲಿ ಅವರು ಅಂಗಡಿಯ ಸಿಸಿಟಿವಿ ಪರಿಶೀಲಿಸಿದಾಗ, ಇದುವರೆಗೂ ಯಾರೂ ಊಹಿಸದ ದೃಶ್ಯಗಳು ಬಯಲಾಗಿವೆ.  ಒಂದು ಹಸು ಟ್ರೇಯಲ್ಲಿದ್ದ ಎಲ್ಲಾ ಹಾಲು ಕುಡಿದು ಪ್ಯಾಕೆಟ್‌ ಗಳನ್ನೂ ತಿಂದಿತ್ತು!

ಈ ಘಟನೆ ಎಲ್ಲೆಡೆ ವೈರಲ್ ಆಗುತ್ತಿದ್ದು, “ಹಾಲು ಕದಿಯುವ ಹಸು” ಸದ್ಯ  ಸೆಲೆಬ್ರಿಟಿಯಾಗಿ ಪರಿಣಮಿಸಿದೆ. ಸ್ಥಳೀಯರು ಕೂಡ ಈ ಅಪರೂಪದ ಬೆಳವಣಿಗೆಯ ಬಗ್ಗೆ ಆಶ್ಚರ್ಯಚಕಿತರಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*