9 ಜಿಲ್ಲೆಗಳಿಗೆ ರೆಡ್ ಅಲರ್ಟ್: ಈ ಜಿಲ್ಲೆಗಳಲ್ಲಿ ಹೆಚ್ಚಳವಾಗಲಿದೆ ಮಳೆಯ ಪ್ರಮಾಣ

ಭಾಸ್ಕರ ಪತ್ರಿಕೆ
0

ಬೆಂಗಳೂರು: ಕರ್ನಾಟಕದ ಕೆಲವೆಡೆ ಮುಂಗಾರು ಶುರುವಾಗಿದೆ, ಜೂನ್ 13ರಿಂದ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

9 ಜಿಲ್ಲೆಗಳಿಗೆ ರೆಡ್ ಅಲರ್ಟ್​ ಘೋಷಿಸಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ.

ವಿಜಯನಗರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಬಳ್ಳಾರಿ, ಯಾದಗಿರಿ, ರಾಯಚೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಮಂಗಳೂರು, ಕೋಟಾ, ಮುಲ್ಕಿ, ಕುಂದಾಪುರ, ಚಿಟಗುಪ್ಪ, ಭಾಲ್ಕಿ, ದಾವಣಗೆರೆ, ಬೇಗೂರು, ಹರಪನಹಳ್ಳಿ, ಬಾಳೆಹೊನ್ನೂರು, ದಾವಣಗೆರೆ, ಗೌರಿಬಿದನೂರು, ಕಕ್ಕೇರಿ, ಮೂಡುಬಿದಿರೆ, ಮಾಣಿ, ಹುಮ್ನಾಬಾದ್, ಲಕ್ಷ್ಮೇಶ್ವರ, ಲಿಂಗಸುಗೂರು, ಯಡ್ರಾಮಿ, ಕಮಲಾಪುರ, ಶಾಹಪುರ,ಬೀದರ್, ಚನ್ನಗಿರಿ, ಚಾಮರಾಜನಗರ, ಕೃಷ್ಣರಾಜಪೇಟೆಯಲ್ಲಿ ಮಳೆಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*