ತಿಪಟೂರು: ನಗರದ ಶಾರದಾ ನಗರ ಶ್ರೀ ಸಿದ್ದರಾಮೇಶ್ವರ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮೊನ್ನೆರಾತ್ರಿ ಮುಸುಕುದಾರಿ ಕಳ್ಳರ ಗುಂಪು ಮಾರಕಾಸ್ತ್ರ ಹಿಡಿದು,ಓಡಾಡಿರುವ ದೃಶ್ಯ CCTV ಕ್ಯಾಮರಾದಲ್ಲಿ ಸೆರೆಯಾಗಿದೆ.ರಾತ್ರಿ ಮನೆಕಳ್ಳತನಕ್ಕೆ ಹೊಂಚುಹಾಕಿದ ಕಳ್ಳರ ಗುಂಪು,ರಾತ್ರಿವೇಳೆ ಸಾರ್ವಜನಿಕರು ಇರುವ ಸದ್ದುಕೇಳಿ ಪರಾರಿಯಾಗಿದ್ದಾರೆ.
ಮೊನ್ನೆ ತುಮಕೂರಿನಲ್ಲಿ ನಡೆದ ಸಹಕಾರಿ ಸಚಿವ ಕೆ.ಎನ್ ರಾಜಣ್ಣನವರ ಹುಟ್ಟುಹಬ್ಬದ ಹಿನ್ನೆಲೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ಗೆ ತೆರಳಿರುತ್ತಾರೆ,ಕಳ್ಳತನಕ್ಕೆ ಸುಲಭವಾಗಬಹುದು ಎಂದು ಅರಿತ ಕಳ್ಳರು ಹೊಂಚುಹಾಕಿದ್ದಾರೆ ಎನ್ನಲಾಗಿದ್ದು.ತಕ್ಷಣಕ್ಕೆ ತಿಪಟೂರು ಪೊಲೀಸ್ ಠಾಣೆಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಪರಿಶೀಲನೆ ನಡೆಸಿದ್ದಾರೆ.ಸಿಸಿ .ಟಿವಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

