ಚಿಕ್ಕಮಗಳೂರು: ತಾಲೂಕು ಕಚೇರಿಯಲ್ಲಿ ಕೂರಲು ಚೇರ್ ಹಾಕಿಸಲೂ ಸಾಧ್ಯವಿಲ್ಲದಷ್ಟು ರಾಜ್ಯ ಸರ್ಕಾರ ಕಷ್ಟದಲ್ಲಿದೆ ಎನ್ನುವ ಕಾರಣಕ್ಕೆ ಅಜ್ಜಂಪುರ ತಾಲೂಕಿನ ತಾಲೂಕು ಕಚೇರಿಗೆ ದಲಿತ ಸಂಘಟನೆಯ ಕಾರ್ಯಕರ್ತರು ಭಿಕ್ಷೆ ಬೇಡಿ ಚೇರ್ ಕೊಡುಗೆ ನೀಡಿರುವ ಘಟನೆ ನಡೆದಿದೆ.
ರಸ್ತೆಯಲ್ಲಿ ಭಿಕ್ಷೆ ಎತ್ತಿ ತಾಲೂಕು ಕಚೇರಿಗೆ ಕೂರಲು ಚೇರ್ ವ್ಯವಸ್ಥೆಯನ್ನು ದಲಿತ ಸಂಘಟನೆಗಳು ಮಾಡಿಕೊಟ್ಟವು. ತಾಲೂಕು ಕಚೇರಿಯಲ್ಲಿ ತಮ್ಮ ಕೆಲಸಕ್ಕೆ ಸಾರ್ವಜನಿಕರು ಹೋದರೆ ಅಲ್ಲಿ ಕೂರಲು ಚೇರ್ ಇಲ್ಲ ಅಂತ ಭಿಕ್ಷೆ ಎತ್ತಿ ಚೇರ್ ಕೊಡುಗೆ ನೀಡಲಾಗಿದೆ.
ಅಜ್ಜಂಪುರ ತಾಲೂಕಿನ ತಾಲೂಕು ಕಚೇರಿಗೆ ಚೇರ್ ಕೊಡುಗೆ ನೀಡಲಾಗಿದೆ. 3500 ಭಿಕ್ಷೆ ಎತ್ತಿ 2500 ರೂ ಕೊಟ್ಟು ಚೇರ್ ತಂದ ದಲಿತ ಸಂಘಟನೆ ಕಾರ್ಯಕರ್ತರು, ಉಳಿದ 700–800 ರೂಪಾಯಿ ಹಣವನ್ನ ಸರ್ಕಾರಕ್ಕೆ ಕೊಟ್ಟಿದ್ದಾರೆ.
ಅಜ್ಜಂಪುರ ಪಟ್ಟಣದ ಬಸ್ ಸ್ಟ್ಯಾಂಡ್, ಬಿ.ಎಚ್.ರಸ್ತೆ, ಹೋಟೆಲ್, ಅಂಗಡಿಗಳಲ್ಲಿ ಭಿಕ್ಷೆ ಬೇಡುವ ಮೂಲಕ ಸರ್ಕಾರಕ್ಕೆ ಬಿಸಿಮುಟ್ಟಿಸಲಾಯಿತು. ಭಿಕ್ಷೆ ಎತ್ತಿದ ಹಣದಲ್ಲಿ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರಿಗೆಂದೇ 8 ಚೇರ್ ಕೊಡುಗೆ ನೀಡಲಾಯಿತು.
ಮಳೆ ಸುರಿಯುತ್ತಿದ್ರು ರಸ್ತೆ–ರಸ್ತೆಯಲ್ಲಿ ಭಿಕ್ಷೆ ಎತ್ತಿ ಸಂಘಟನೆ ಕಾರ್ಯಕರ್ತರು, ದಲಿತಪರ ಸಂಘಟನೆಗಳ ಒಕ್ಕೂಟ, ಸರ್ಕಾರ ಕಷ್ಟದಲ್ಲಿದೆ ಎಂದು ಭಿಕ್ಷೆಯಲ್ಲಿ ಉಳಿದ ಹಣವನ್ನ ಸರ್ಕಾರಕ್ಕೆ ಕೊಡುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

