
ಕುಕನೂರು: ಅಧಿಕಾರಿಗಳು ಚಾಪೆ ಕೆಳಗೆ ನುಗ್ಗಿದ್ರೇ, ವ್ಯಾಪಾರಸ್ಥರು ರಂಗೋಲಿ ಕೆಳಗೆ ನುಗ್ತಾರೇ,,,
ಏನೋ ಒಂದೆರಡು ದಿನ ಆದೇಶ ಬಂದಾಗ ಕಟ್ ನಿಟ್ ಆದೇಶ ಪಾಲನೆ ಮಾಡಿ ನಂತರ ಮತ್ತೆ ಅದೇ ರಾಗ ಅದೇ ಹಾಡು ಚಾಲೂ..
ಹೌದು,,! ಸರಕಾರ ನಿಷೇದ ಹೇರಿರುವ ಮರು ಬಳಕೆಯಾಗದ ಪ್ಲಾಸ್ಟಿಕ್ ಚೀಲ, ಏರ್ ಬಡ್ಸ್, ಎಳೆ ನೀರು ಸ್ಟ್ರಾ ಹೀಗೆ ಅನೇಕ ಮರು ಬಳಕೆಯಾಗದ ಪ್ಲಾಸ್ಟಿಕ್ ನಿಷೇಧಿಸಲಾಗಿದೆ.
ಪ್ರತಿ ನಿತ್ಯ ರಾಜ್ಯಾದ್ಯಂತ ಕಸ ವಿಲೇವಾರಿ ವಾಹನಗಳಲ್ಲಿ ಬನ್ನಿ, ಬನ್ನಿ ಎಂದು ಹಾಡು ಹೇಳುತ್ತಾ ಹಸಿ ಕಸ, ಒಣ ಕಸ ಬೇರೆ ಬೇರೆಯಾಗಿಡಿ ಮರು ಬಳಕೆಯಾಗದ ಪ್ಲಾಸ್ಟಿಕ್ ಇನ್ನೀತರೇ ವಸ್ತುಗಳ ಬಳಕೆ, ಮಾರಾಟ ನಿಷೇಧಿಸಲಾಗಿದೆ. ಒಂದು ವೇಳೆ ಬಳಸುವದಾಗಲಿ ಮಾರಾಟ ಮಾಡುವುದಾಗಲಿ ಕಂಡು ಬಂದಲ್ಲಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪುಂಖಾನು ಪುಂಖವಾಗಿ ವಾಹನಗಳ ಮೂಲಕ ಹೇಳಿಸುತ್ತಾ ಸಾಗಿ ಈ ಜುಲೈಗೆ ಹೆಚ್ಚು ಕಡಿಮೆ ಮೂರು, ನಾಲ್ಕು ವರ್ಷವಾದರೂ ಗತಿಸಿರಬಹುದು, ಆದರೂ ಪ್ಲಾಸ್ಟಿಕ್ ಬಳಕೆ, ಮಾರಾಟ ನಿಂತಿಲ್ಲಾ.
ಆದರೆ ಸರಕಾರ ಇಷ್ಟೇಲ್ಲಾ ಹೇಳಿಸುವ ಬದಲು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ತೊಡಿದಂತೆ, ಚಿಲ್ಲರೇ, ಸಗಟು ವ್ಯಾಪಾರಿಗಳ ಬಳಿ ಇರುವ ಪ್ಲಾಸ್ಟಿಕ್ ತಂದು ಒಂದು ದಿನ ನಿಷೇಧ ಮಾಡಿದರೇ ಪೂರ್ಣ ಪರಿಹಾರವಲ್ಲಾ, ಇವುಗಳನ್ನು ತಯಾರಿಸುವ, ವಿತರಿಸುವ ಕಾರ್ಖಾನೆಗಳಿಗೆ ಎಚ್ಚರಿಕೆ ನೀಡಿ ಬಂದ್ ಮಾಡಿಸಲು ಸಂಬಂಧಿಸಿದ ಇಲಾಖೆ ಮುಂದಾಗಬೇಕಿದೆ.
ದೊಡ್ಡ ದೊಡ್ಡ ಗೋಡೌನ್ ಗಳಲ್ಲಿ ಅಡಗಿಸಿರುವ ಕಾರ್ಖಾನೆಯವರ ಮೇಲೆ ಕ್ರಮ ವಹಿಸಿದಾಗ ಮಾತ್ರ ಕಡಿವಾಣ ಹಾಕಲು ಸಾಧ್ಯ ಎನ್ನುವುದು ಸಾರ್ವಜನಿಕ ವಲಯದ ಮಾತು.
ಒಟ್ಟಾರೇ ಕುಕನೂರು ಪಟ್ಟಣದಲ್ಲಿಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು ಪ್ಲಾಸ್ಟಿಕ್ ಮಾರಾಟ ಮಾಡುವ ಅಂಗಡಿಗಳಿಗೆ ತೆರಳಿ, ಅವರಲ್ಲಿರುವ ಆಲ್ಪ, ಸ್ವಲ್ಪ ತಂದು ಪಟ್ಟಣ ಪಂಚಾಯತಿಯಲ್ಲಿ ಹಾಕಿದ್ದೇನೋ ಆಗಿದೆ. ಮುಂದಿನ ಇವರ ಕಾರ್ಯ ವೈಖರಿ ಹೇಗೆ ಸಾಗುವುದೋ ಕಾದು ನೋಡಬೇಕಿದೆ.
