ತಿಪಟೂರು ತಾಲ್ಲೂಕು ನೂತನ BJP ಅಧ್ಯಕ್ಷರಾಗಿ ಸತೀಶ್ ನಗರಾಧ್ಯಕ್ಷರಾಗಿ ಜಗದೀಶ್ ಹಳೇಪಾಳ್ಯ ಪದಗ್ರಹಣ

ಭಾಸ್ಕರ ಪತ್ರಿಕೆ
0

ತಿಪಟೂರು: ತಾಲ್ಲೂಕು ಭಾರತೀಯ ಜನತಾ ಪಕ್ಷದ ನೂತನ ಅಧ್ಯಕ್ಷರಾಗಿ ಸತೀಶ್ ಹಾಗೂ ನಗರಾಧ್ಯಕ್ಷರಾಗಿ ಹಳೇಪಾಳ್ಯ ಜಗದೀಶ್ ಪದಗ್ರಹಣ ನೆರವೇರಿಸಲಾಯಿತು.

ನಗರದ ಶ್ರೀಗುರುಕುಲ ಕಲ್ಯಾಣಮಂಟಪದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷರಿಂದ ಬಿಜೆಪಿ ಪಕ್ಷದ ಬಾವುಟ ಹಸ್ತಾಂತರಿಸುವ ಮೂಲಕ ಪದಗ್ರಹಣ ನೆರವೇರಿಸಲಾಯಿತು.
ಜ್ಯೋತಿಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮಾತನಾಡಿ ಬಿಜೆಪಿ ಕಾರ್ಯಕರ್ತರ ಪರಿಶ್ರಮದಿಂದ ಸಧೃಡವಾಗಿದೆ.ನಮ್ಮ ಕಾರ್ಯಕರ್ತರೆ ನಮಗೆ ಶಕ್ತಿ,ಪಕ್ಷದ ಸಿದ್ದಾಂತದ ಮೇಲೆ ನಂಬಿಕೆ ಹೊಂದಿದ್ದು,ಪಕ್ಷ ನೀಡುವ ಜವಾಬ್ದಾರಿಯನ್ನ, ನಮ್ಮ ಕಾರ್ಯಕರ್ತರು ನಿಭಾಯಿಸುತ್ತಾರೆ,ಚುನಾವಣೆಗಳಲ್ಲಿ ಪಕ್ಷ ನೀಡುವ ಸೂಚನೆಯಂತೆ ಪಕ್ಷ ಸೂಚಿಸಿದ ಅಭ್ಯಾರ್ಥಿಯ ಪರವಾಗಿ ಕೆಲಸ ಮಾಡುತ್ತೇವೆ,ನಮಗೆ ಪಕ್ಷದ ಸಿದ್ದಾಂತ ಮುಖ್ಯ,ಪಕ್ಷ ಸೂಚಿಸುವ ಕೆಲಸ ಮಾಡಬೇಕು,ಎನ್ನುವ ಪಾಠವನ್ನ ನಮ್ಮ ಪಕ್ಷದ ನಾಯಕರು ನಮಗೆ ಕಲಿಸಿದ್ದಾರೆ. ಅದೇ ದಾರಿಯಲ್ಲಿ ನಾವು ನಡೆಯುತ್ತಿದ್ದೇವೆ,ನಮ್ಮ ತಿಪಟೂರಿನಲ್ಲಿ ಕಾರ್ಯಕರ್ತರು ಪಕ್ಷ ನಿಷ್ಟೆಯಿಂದ ಪಕ್ಷ ಸೂಚಿಸಿದ ಮಾರ್ಗದಲ್ಲಿ ನಡೆಯುತ್ತಿದ್ದಾರೆ,ಎಂದು ತಿಳಿಸಿದರು.
ಬಿಜೆಪಿ ಉಸ್ತುವಾರಿ ಮುಖಂಡರಾದ ಶ್ರೀಮತಿ ಪೂರ್ಣಿಮ ಪ್ರಕಾಶ್ ಮಾತನಾಡಿ ಬಿಜೆಪಿ ಶಾಮ್ ಪ್ರಸಾದ್ ಮುಖರ್ಜಿ.ದೀನ್ ದಯಾಳ್ ಉಪಾಧ್ಯರಂತ ಮಹಾನ್ ನಾಯಕರ ತ್ಯಾಗದ.ಹಾಗೂ ಸಿದ್ದಾಂತದ ದಾರಿಯಲ್ಲಿ ನಡೆದುಬಂದಿದೆ,ನಮ್ಮ ಪಕ್ಷ ನೀಡುವ ಹುದ್ದೆಗಳನ್ನ ಜವಾಬ್ದಾರಿಗಳು ಎಂದು ಭಾವಿಸಿ ಕೆಲಸ ಮಾಡಿ,ಪಕ್ಷವನ್ನ ತಳಮಟ್ಟದಿಂದ ಸಂಘಟನೆಗೆ ಹೆಚ್ಚು ಹೊತ್ತು ನೀಡಬೇಕು,ಅಟಲ್ ಬಿಹಾರಿ ವಾಜಪೇಯಿ.ಎಲ್. ಕೆ ಅಡ್ವಾಣಿ ಯಂತಹ ಮಾಹನ್ ನಾಯಕರ ಆದರ್ಶಗಳು ನಮ್ಮ ಮುಂದಿವೆ ,ಅವರ ಆದರ್ಶಗಳೇ ನಮಗೆ ದಾರಿಯಾಗಿವೆ,ನೂತನ ಅಧ್ಯಕ್ಷರು ಕಿರಿಯರ ಸಲಹೆ, ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಮಾಡಿ ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸಬೇಕು.ನಮಗೆ ಐಡೆಂಟಿಟಿ ಕಾರ್ಡ್ ಮುಖಂಡರ ಅಗತ್ಯವಿಲ್ಲ,ಕೇವಲ ಪ್ಲೆಕ್ಸ್ ಬ್ಯಾನರ್ ಗಳಲ್ಲಿ ಪೋಟೊಹಾಕಿಕೊಂಡು ಓಡಾಡದೆ,ಪ್ರತಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಬೇಕು.ಸಂಘಟನೆ ಎಷ್ಟು ಮುಖ್ಯವೋ,ರಾಜಕೀಯ ಅಧಿಕಾರವೂ ಅಷ್ಟೆ ಮುಖ್ಯ ಮುಂದಿನ ಜಿಲ್ಲಾಪಂಚಾಯ್ತಿ,ತಾಲ್ಲೋಕು ಪಂಚಾಯ್ತಿ ಗ್ರಾಮಪಂಚಾಯ್ತಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷ ಸಧೃಡಗೊಳಿಸಿ ಹೆಚ್ಚು ಅಭ್ಯಾರ್ಥಿಗಳನ್ನೇ ಗೆಲ್ಲಿಸಿ ಅಧಿಕಾರಹಿಡಿಯಲು ಕೆಲಸ ಮಾಡಬೇಕು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಬಿಜೆಪಿ ಉಸ್ತುವಾರಿಗಳಾದ ಹಾ.ನ ಲಿಂಗಪ್ಪ.ದಿಶಾ ಸಮಿತಿ ಸದಸ್ಯ ಆಯರಹಳ್ಳಿ ಶಂಕರಪ್ಪ..ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್‌.ಜಿಲ್ಲಾ ಪ್ರದಾನ ಕಾರ್ಯದರ್ಶಿ ಗಂಗರಾಜು.ನಿಕಟಪೂರ್ವ ಅಧ್ಯಕ್ಷ ಬಳ್ಳೆಕಟ್ಟೆ ಸುರೇಶ್.ಗುಲಾಬಿ ಸುರೇಶ್.ನೂತನ ಅಧ್ಯಕ್ಷರಾದ ಸತೀಶ್ .ನಗರಾಧ್ಯಕ್ಷ ಹಳೇಪಾಳ್ಯ ಜಗದೀಶ್.ಮುಖಂಡರಾದ ಬಿಸ್ಲೇಹಳ್ಳಿ ಜಗದೀಶ್ ಮುಂತ್ತಾದವರು ಉಪಸ್ಥಿತರಿದರು.

ವರದಿ: ಶುಭ ವಿಶ್ವಕರ್ಮ

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*