ಕೌಸ್ತುಬ ಹೋಟೆಲ್ ನಲ್ಲಿ ಕಾರ್ಮಿಕರ ಸಂಘದ ಸಭೆ

ಭಾಸ್ಕರ ಪತ್ರಿಕೆ
0

ತಿಪಟೂರು: ನಗರದ ಕೌಸ್ತುಬ ಹೋಟೆಲ್ ನಲ್ಲಿ ಕಾರ್ಮಿಕರ ಸಂಘದ ಸಭೆ ಕರೆಯಲಾಗಿತ್ತು.  ಸಭೆಗೆ  INTUC ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಮಶಿವಯ್ಯ ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ಕೃಷ್ಣಮೂರ್ತಿಯವರು ಸಭೆಗೆ ಹಾಜರಾಗಿದ್ದರು. ಇವರ ಸಮ್ಮುಖದಲ್ಲಿ ತಿಪಟೂರು ತಾಲೂಕಿನ ಕಾರ್ಮಿಕ ಸಂಘದ ಎಲ್ಲಾ ಸದಸ್ಯರು ಹಾಜರಾಗಿದ್ದರು. ಈ ಸಂದರ್ಭದಲ್ಲಿ ಕಾರ್ಮಿಕರ ಸಂಘಟನೆಯ ಬಲಪಡಿಸುವ ಬಗ್ಗೆ ಚರ್ಚಿಸಲಾಯಿತು ಹಾಗೂ ಅರ್ಹ ಫಲಾನುಭವಿಗಳಿಗೆ ನೊಂದಣಿ ಮಾಡಿಸುವುದು ಸರ್ಕಾರದ ಸೌಲಭ್ಯವನ್ನು ಕೊಡಿಸುವುದರ ಬಗ್ಗೆ ತೀರ್ಮಾನಿಸಲಾಯಿತು ಹಾಗೂ  ತಾಲೂಕಿನ INTUC  ಅಧ್ಯಕ್ಷರ ಆಯ್ಕೆ ಮಾಡುವ ಬಗ್ಗೆ ಜಿಲ್ಲಾ ಕಮಿಟಿ ಹಾಗೂ ತಾಲೂಕು ಕಮಿಟಿಯಲ್ಲಿ ಚರ್ಚಿಸಿ ತಾಲೂಕಿನ ಶಾಸಕರ ಗಮನಕ್ಕೆ ತಂದು ಸಿದ್ದಯ್ಯನವರು ಬುಳುವನೇರಲು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ  ಬಗ್ಗೆ ತೀರ್ಮಾನಿಸಲಾಯಿತು.   ಹಾಗೂ ಕಾರ್ಮಿಕ ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎಲ್ಲಪ್ಪನವರ ಗಮನಕ್ಕೆ ತಂದು   ಜಿಲ್ಲಾ ಕಮಿಟಿಯ ಹಾಗೂ ತಾಲೂಕಿನ ಎಲ್ಲಾ ಸಂಘದ ಸದಸ್ಯರ ಒಪ್ಪಿಗೆಯ ಮೇರೆಗೆ ಬಿಬಿ ಸಿದ್ದಲಿಂಗ ಮೂರ್ತಿ ಕಾರ್ಮಿಕರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಸಭೆ ಯಲ್ಲಿ ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಾಸಕರು ಕೆ ಷಡಕ್ಷರಿ,  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಮಶಿವಯ್ಯ, ಜಿಲ್ಲಾಧ್ಯಕ್ಷರಾದ ಸರ್ವೇಶ್ವರ ಆಚಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರಣೇಶ್, ಹರೋಘಟ್ಟ ಗಂಗಾಧರ, ಸಿದ್ದೇಶ್, ಹರೀಶ್ ಮತ್ತಿತರು ಹಾಗೂ ಪತ್ರಿಕಾ ಮಿತ್ರರು ಸಭೆಯಲ್ಲಿ ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*