ಸಿನಿ ಪ್ರಿಯರ ಮನಗೆದ್ದ ‘ಸು ಫ್ರಮ್ ಸೋ’ ಚಿತ್ರದ ಟ್ರೈಲರ್ : ಹೀಗೂ ಸಿನಿಮಾ ಮಾಡಬಹುದೇ?

ಭಾಸ್ಕರ ಪತ್ರಿಕೆ
0

ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದೆ. ಈ ನಡುವೆ ಕರಾವಳಿ ಭಾಗದ ಕಥೆಯನ್ನೊಳಗೊಂಡ ಚಿತ್ರ ‘ಸು ಫ್ರಮ್ ಸೋ’(Su From So) ಟ್ರೈಲರ್ ಮೂಲಕ ಗಮನ ಸೆಳೆದಿದೆ.  ಈ ಸಿನಿಮಾ ಜು.25ರಂದು ಬಿಡುಗಡೆಯಾಗಲಿದೆ. ಚಿತ್ರದ ಟ್ರೈಲರ್ ನೋಡಿ ಸಿನಿ ಪ್ರಿಯರು ಫಿದಾ ಆಗಿದ್ದಾರೆ.

ಚಿತ್ರದ ಪ್ರೀಮಿಯರ್ ಶೋ ಜುಲೈ 21ರಂದು ಮಂಗಳೂರಿನಲ್ಲಿ ನಡೆದಿದೆ. ಸಿನಿಮಾ ನೋಡಿದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸ್ಟಾರ್ ನಟರ ಧಾಮ್ ಧೂಮ್ ಚಿತ್ರಗಳ ನಡುವೆ ಈ ಹೊಸ ರೀತಿಯ ಸಿನಿಮಾವೊಂದನ್ನು ತರುವ ಪ್ರಯತ್ನವನ್ನು ಮೆಚ್ಚಿದ್ದಾರೆ.

ಜುಲೈ 24ರಂದು ಬೆಂಗಳೂರಿನಲ್ಲೂ ಪ್ರೀಮಿಯರ್ ಶೋ ಆಯೋಜನೆ ಮಾಡಲಾಗಿದೆ. ಚಿತ್ರವನ್ನು ನೋಡಲು ಸಿನಿಪ್ರಿಯರು ಕಾದಿದ್ದಾರೆ. ಚಿತ್ರದ ಟ್ರೈಲರ್ ನೋಡಿದರೆ, ಈ ಚಿತ್ರ ಸಿನಿ ಪ್ರಿಯರನ್ನು ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸುವಂತೆ ಕಾಣಿಸುತ್ತಿದೆ ಅಂತ ಸಿನಿ ಪ್ರಿಯರು  ಅಭಿಪ್ರಾಯಪಟ್ಟಿದ್ದಾರೆ.

ರಾಜ್ ಬಿ.ಶೆಟ್ಟಿ ಅವರ ಲೈಟರ್ ಬುದ್ಧ ಫಿಲಂಸ್ ಲಾಂಛನದಡಿಯಲ್ಲಿ ರಾಜ್ ಬಿ. ಶೆಟ್ಟಿ, ಶಶಿಧರ ಶೆಟ್ಟಿ ಬರೋಡಾ, ರವಿ ರೈ ಕಳಸ ನಿರ್ಮಾಣ ಮಾಡಿದ್ದಾರೆ. ಜೆ.ಪಿ. ತೂಮಿನಾಡ್ ಅವರು ನಿರ್ದೇಶನ ಮಾಡಿದ್ದಾರೆ. ಜೆಪಿ ತೂಮಿನಾಡ, ಶನಿಲ್ ಗೌತಮ್, ಪ್ರಕಾಶ್ ಕೆ. ತೂಮಿನಾಡ್, ಮೈಮ್ ರಾಮದಾಸ್, ದೀಪಕ್ ರೈ ಪಾಣಜೆ, ಅರ್ಜುನ್ ಕಜೆ ಮೊದಲಾದವರು ಅಭಿನಯಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*