ನದಿ ನೀರಿಗಾಗಿ ಎರಡು ಊರಿನ ರೈತರ ನಡುವೆ ಫೈಟ್!

ಭಾಸ್ಕರ ಪತ್ರಿಕೆ
0

ಚಿಕ್ಕಮಗಳೂರು:  ನದಿ ನೀರನ್ನ ಕೆರೆಗೆ ಹರಿಸಲು ರೈತರ ವಿರೋಧ ವ್ಯಕ್ತವಾಗಿದೆ. ವೇದಾ ನದಿ ನೀರಿಗಾಗಿ 2 ಊರಿನ ರೈತರ ಮಧ್ಯೆ ಕೋಲ್ಡ್ ವಾರ್ ಆರಂಭಗೊಂಡಿದೆ.

ಕಡೂರು ತಾಲೂಕಿನ ವೇದಾ ನದಿ ನೀರಿಗಾಗಿ ರೈತರ ಹೋರಾಟ ಆರಂಭಗೊಂಡಿದೆ. ವೇದಾ ನದಿ ನೀರನ್ನ ಹುಲಿಕೆರೆ–ನಾಗೇನಹಳ್ಳಿ ಕೆರೆಗೆ ಹರಿಸಲು ಪರಸ್ಪರ ವಿರೋಧ ವ್ಯಕ್ತವಾಗಿದೆ.

ಕಡೂರು–ಸಖರಾಯಪಟ್ಟಣ ರೈತರ ಮಧ್ಯೆ ನೀರಿಗಾಗಿ ಜಗಳವಾಗಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೂ ಜಗಳ ಹೋಗಿದೆ. ಕೊನೆಗೆ ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ಶಾಂತವಾಗಿದೆ.

ಶಾಸಕರ ಜೊತೆ ಸಭೆ ನಡೆಸಿ ಸ್ಥಳಕ್ಕೆ ಬಂದಿದ್ದ ರೈತರ ಜೊತೆ ರೈತರೇ ಜಗಳವಾಡಿದ್ದಾರೆ. ನೀರಿಗಾಗಿ ನೂಕಾಟ–ತಳ್ಳಾಟದ ಮೂಲಕ ಜಗಳಕ್ಕೆ ನಿಂತಿದ್ದ ರೈತರನ್ನು  ಭಾರೀ ಪ್ರಮಾಣದಲ್ಲಿದ್ದ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿ ಕಾಪಾಡಿದರು.

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ರೈತರ ಜೊತೆ ಮಾತುಕತೆ ನಡೆಸಿದರು. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನಲ್ಲಿ ಈ ಘಟನೆ ನಡೆದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*