ಬಸ್ ಚಾಲಕನ ಮೊಬೈಲ್ ಗೀಳು! ಪ್ರಯಾಣಿಕರ ಜೀವಕ್ಕೆ ಹೊಣೆ ಯಾರು…?

ಭಾಸ್ಕರ ಪತ್ರಿಕೆ
0


ಮೂಡಲಗಿ: ಕರ್ನಾಟಕರಸ್ತೆ ಸಾರಿಗೆ ಸಂಸ್ಥೆಯ ಗೋಕಾಕ ಘಟಕದ ಚಾಲಕರೊಬ್ಬರು ಮೊಬೈಲ್ ಬಳಕೆ ಮಾಡುತ್ತ ಚಾಲನೆ ಮಾಡಿದ್ದು, ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದಾರೆ.ದಿನೇ ದಿನೇ ಅಪಘಾತ ಹೆಚ್ಚುತ್ತಿದು ಕಾರಣ ಮೊಬೈಲ್ ಬಳಕೆ ಒಂದು ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ಪ್ರಯಾಣಿಕರು.

ಗೋಕಾಕ ಘಟಕದ ಚಾಲಕರೊಬ್ಬರು(ಅ, 18)ಚಾಲನಾ ಸಮಯದಲ್ಲಿ ಮೊಬೈಲ್ ಬಳಕೆ ಮಾಡಿದ್ದು ಪ್ರಯಾಣಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಶ್ರಾವಣ ಮಾಸದ ಕಡೆಯ ಸೋಮವಾರವಿರುವುದರಿಂದ ಈ ಬಸ್ಸಲ್ಲಿ ಸುಮಾರು 70 ರಿಂದ 80 ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಚಾಲಕನ ವಿರುದ್ಧ ಕ್ರಮ ಕೈಗೊಳ್ಳವಂತೆ ಒತ್ತಾಯಿಸಿದ್ದಾರೆ.

ಬಸ್ ಗೋಕಾಕಯಿಂದ ಮೂಡಲಗಿ ಮಾರ್ಗವಾಗಿ ವಿಜಯಪುರ ಹೋಗುತ್ತಿತ್ತು. ನಿಪ್ಪಾಣಿ-ರಾಯಚೂರು ಹೈ-ವೆ ರಸ್ತೆ ತುಂಬಾ ಚಿಕ್ಕದಾಗಿ ಇರುವುದರಿಂದ ವಾರಕ್ಕೊಂದು ಅಪಘಾತವನ್ನು ನೋಡುತ್ತಿರುವ ಪ್ರಯಾಣಿಕರು ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಸ್ಥಿತಿ ನಿರ್ಮಾಣವಾಗಿದೆ.ಬೈಕ್ ಬಿಟ್ಟು ಬಸ್ ಅಲ್ಲಿ ಹೋದ್ರೆ ಬಸ್ ಚಾಲಕರಂತೂ ಬೇಕಾಬಿಟ್ಟಿಯಾಗಿ ಚಾಲನೆ ಮಾಡುವುದು ಮೊಬೈಲ್ ಬಳಸುವುದು.ಇನ್ನು ದಿನನಿತ್ಯ ಸಾವಿರಾರು ಜನರು ಪ್ರಯಾಣ ಮಾಡುತ್ತಾರೆ.ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೋಯ್ಯುವುದು ಚಾಲಕನ ಕರ್ತವ್ಯವಾಗಿದೆ,ಈ ಬಸ್ ಚಾಲಕನ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಯಾಣಿಕರು ಸಂಸ್ಥೆಯ ಮೇಲಧಿಕಾರಿಗಳನ್ನು ಒತ್ತಾಯಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*