ತಿಪಟೂರು: ತುಮಕೂರು ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ತಿಪಟೂರು ಕ್ಷೇತ್ರದಿಂದ ಪ್ರತಿನಿಧಿಸಿದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಹಕಾರಿ ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷರಾದ ಕೆ.ಷಡಕ್ಷರಿ ಅವರು 12 ಮತ ಪಡೆದು,ತಮ್ಮ ಪ್ರತಿಸ್ಪರ್ಧಿ ಮಧುಸೂಧನ್ ರವರನ್ನ ಪರಾಭಗೊಳಿಸುವ ಮೂಲಕ ತಮ್ಮ ದಿಗ್ವಿಜಯ ಮುಂದುವರೆಸಿದ್ದಾರೆ.
ಪ್ರತಿಸ್ಪರ್ಧಿ ಮಧುಸೂಧನ್ 06ಮತಪಡೆದಿದ್ದಾರೆ.ಈ ಭಾರೀಯ ಡಿ.ಸಿ.ಸಿ ಬ್ಯಾಂಕ್ ಚುನಾವಣೆಯಲ್ಲಿ ಕೆ.ಷಡಕ್ಷರಿಯವರ ವಿರೋಧಿ ಗುಂಪು ಶತಾಯಗತಾಯ ಕೆಷಡಕ್ಷರಿಯವರನ್ನ ಸೋಲಿಸಲೇ ಬೇಕು ಎಂದು ಟೊಂಕಕಟ್ಟಿ ನಿಂತ್ತಿತ್ತು,ಮಾಜಿ ಸಂಸದ ಜಿ.ಎಸ್ ಬಸವರಾಜು ಹಾಗೂ ಕೇಂದ್ರ ಸಚಿವ ವಿ.ಸೋಮಣ್ಣ ನವರ ಆಪ್ತರಾಗಿ ಗುರ್ತಿಸಿಕೊಂಡಿದ್ದ ಮಧುಸೂಧನ್ ರವರನ್ನ ಕಣಕ್ಕಿಳಿಸಿ ಹೋರಾಟಕಟ್ಟಿದರು.ಆದರೆ ಕೆ.ಷಡಕ್ಷರಿಯವರ ರಾಜಕೀಯ ಪಟ್ಟುಗಳಿಂದ ಸೋಲ್ಲೊಪ ಬೇಕಾಯಿತು,ಈ ಭಾರಿ ಡಿ.ಸಿ.ಸಿ ಬ್ಯಾಂಕ್ ಚುನಾವಣೆಯಲ್ಲಿ ಸತತ 7ಚುನಾವಣೆ ಗೆಲುವುಸಾಧಿಸಿದ್ದು ಗೆಲುವಿನ ಓಟ ಮುಂದುವರೆಸಿದ್ದಾರೆ.ಶಾಸಕ ಕೆ.ಷಡಕ್ಷರಿ ಹಾಗೂ ಕೆ.ಎನ್ ರಾಜಣ್ಣ ಟೀಮ್ ನ ಎಲ್ಲ ಸದಸ್ಯರು ಗೆಲುವು ಸಾಧಿಸುವ ಮೂಲಕ ಕೆ.ಎನ್ ರಾಜಣ್ಣ ನವರ ಅಧ್ಯಕ್ಷ ಪಟ್ಟಕ್ಕೆ ಕೆಲವೇ ಮೆಟ್ಟಿಲು ಎನ್ನುವಂತ್ತಾಗಿದೆ.

