ಡಿ.ಕೆ.ಶಿವಕುಮಾರ್ RSS ಗೀತೆನೂ ಹಾಡಬಹುದು, ಆದ್ರೆ ನಾವು ಏನೂ ಮಾತನಾಡಬಾರದು: ಕೆ.ಎನ್.ರಾಜಣ್ಣ ಕಿಡಿ

ಭಾಸ್ಕರ ಪತ್ರಿಕೆ
0

ತುಮಕೂರು:  ಕೆಪಿಸಿಸಿ ಅಧ್ಯಕ್ಷರು  RSS ಗೀತೆನೂ ಹಾಡಬಹುದು ಏನು ಬೇಕಾದ್ರೂ ಮಾಡಬಹುದು. ಆದ್ರೆ ನಾವು ಮಾತ್ರ ಏನೂ ಮಾಡುವ ಹಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಇತ್ತೀಚೆಗೆ ಸಚಿವ ಸ್ಥಾನದಿಂದ ವಜಾಗೊಂಡಿದ್ದ ಮಾಜಿ ಸಚಿವ ಕೆ.ಎನ್.ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.  ಡಿಕೆಶಿ ಅಮಿತ್ ಶಾ ಜೊತೆ ಹೋಗಿ ಸದ್ಗುರು ಜೊತೆ ಡಯಾಸ್ ಮೇಲೆ ಕುಳಿತುಕೊಳ್ಳಬಹುದು, ಆದ್ರೆ ನಾವು ಮಾತ್ರ ಮಾಡುವ ಹಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರು ಪ್ರಯಾಗ್ ರಾಜ್‍ಗೆ  ಹೋಗಿ ಸ್ನಾನ ಮಾಡಿಬಿಟ್ಟರೆ ಬಡವರ ಹೊಟ್ಟೆ ತುಂಬುತ್ತಾ ಅಂತ ಹೇಳಿದ್ದರು. ಅದಕ್ಕೆ ವಿರುದ್ಧವಾಗಿ ಡಿಕೆಶಿ ಅಲ್ಲಿಗೂ ಹೋಗಿದ್ದರು. ಅಂಬಾನಿ ಮನೆ ಮದುವೆಯನ್ನು ರಾಹುಲ್ ಗಾಂಧಿಯವರು ಸ್ವೀಕಾರ ಮಾಡಲು ಹಿಂದೆ ಮುಂದೆ ನೋಡಿದ್ರು. ಅವರು ಸ್ವೀಕಾರ ಮಾಡೋದಿಲ್ಲ. ಅಂತಹ ಮದುವೆಗೆ ಡಿಕೆಶಿ ಕುಟುಂಬ ಸಮೇತ ಹೋಗ್ತಾರೆ ಎಂದು ರಾಜಣ್ಣ ಟೀಕಿಸಿದ್ರು.

ನಾವು ಎಂಎಲ್ ಎಗಳ ಸಭೆ ಕರೆಯೋ ಹಾಗಿಲ್ಲ, ಬೇರೆಯವರು ಕರೆಯಬಹುದು, ಮಾತನಾಡಬಹುದು. ಇವೆಲ್ಲದಕ್ಕೆ ಸೂಕ್ತ ಸಮಯದಲ್ಲಿ ಸೂಕ್ತ ಉತ್ತರ ಕೊಡ್ತೀನಿ ಅಂತ ಅವರು ಅಸಮಾಧಾನ ಹೊರ ಹಾಕಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*