ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭಕ್ಕೆ ದಿನಗಣನೆ

ಭಾಸ್ಕರ ಪತ್ರಿಕೆ
0

ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಕಲರ್ಸ್ ಕನ್ನಡ ವಾಹಿನಿಯು ಈ ಬಾರಿಯ ಸೀಸನ್‌ ನ ಪ್ರೋಮೋವನ್ನು ಬಿಡುಗಡೆ ಮಾಡಿದೆ.

ಸೆಪ್ಟೆಂಬರ್ 28ರಂದು ಗ್ರಾಂಡ್ ಓಪನಿಂಗ್‌ನೊಂದಿಗೆ ಶೋ ಆರಂಭವಾಗಲಿದೆ. ಸೆಪ್ಟೆಂಬರ್ 29 ರಿಂದ ಪ್ರತಿದಿನ ಪ್ರಸಾರವಾಗಲಿದೆ. ಕನ್ನಡ ಚಿತ್ರರಂಗದ ಸೂಪರ್‌ ಸ್ಟಾರ್ ಕಿಚ್ಚ ಸುದೀಪ್ ಈ ಬಾರಿಯೂ ನಿರೂಪಕರಾಗಿದ್ದಾರೆ

ಕಲರ್ಸ್ ಕನ್ನಡ ವಾಹಿನಿಯು ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಸುದೀಪ್‌ ಆಕರ್ಷಕ ಎಂಟ್ರಿ ನೀಡಿದ್ದಾರೆ. ನಾನು ರೆಡಿ ಅಂದಿದ್ದಾರೆ. ಹೊಸ ಸೆಟ್ ರೆಡಿ, ಹೊಸ ಕಂಟೆಸ್ಟೆಂಟ್ ರೆಡಿ, 7 ಕೋಟಿ ಕನ್ನಡಿಗರೂ ರೆಡಿ… ನೀವು?” ಎಂಬ ವಾಯ್ಸ್‌ಓವರ್‌ನೊಂದಿಗೆ ಸುದೀಪ್‌ ಅವರು ಕೂಡ “ರೆಡಿ!” ಎಂಬ ವಾಕ್ಯವು ಪ್ರೋಮೋದಲ್ಲಿ ನೀಡಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*