ಸಿದ್ದಿ ವಿನಾಯಕ ಸೇವಾ ಸಂಘದ ಗಣಪತಿ ವಿಸರ್ಜನೆ

ಭಾಸ್ಕರ ಪತ್ರಿಕೆ
0


ತಿಪಟೂರು: ನಗರದ ಕಂಚಾಘಟ್ಟ ಹೊಸಬಡಾವಣೆಯ ಬಿ.ಎಂ.ಆರ್. ಲೇಔಟ್ ಶ್ರೀ ಸಿದ್ಧಿ ವಿನಾಯಕ ಸೇವಾ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ, ಶ್ರೀ ಗಣೇಶ ಮೂರ್ತಿಯ ವಿಸರ್ಜನಾ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಷಡಕ್ಷರಿ, ಈ ಬಡಾವಣೆ ಹೆಚ್ಚು ವಿಸ್ತೀರ್ಣ ಹೊಂದಿದ್ದು, ನಗರಸಭೆ ವತಿಯಿಂದ ನೀವುಗಳು ಸೂಚಿಸಿದ ಹೆಸರನ್ನು ಈ ಬಡಾವಣೆಗೆ ಅನುಮೋದನೆ ಮಾಡಿಸಿಕೊಡುತ್ತೇನೆ. ಇನ್ನೂ ಒಂದು ವರ್ಷದೊಳಗೆ ಶಾಶ್ವತ ಕುಡಿಯುವ ನೀರನ್ನು ನಗರದ ಪ್ರತಿಯೊಂದು ಮನೆಗೆ ಒದಗಿಸಲಾಗುವುದು. ಸಾರ್ವಜನಿಕರು ಸಾಮರಸ್ಯ ಮತ್ತು ಸೌಹಾರ್ದತೆಯಿಂದ ಗಣೇಶನ ಉತ್ಸವ ನಡೆಸುತ್ತಿರುವುದು ಕಲ್ಪತರು ನಾಡಿನ ಗರಿಮೆ. ಹೀಗೆ ಪ್ರತಿ ವರ್ಷವೂ ಗಣಪತಿ ಉತ್ಸವವನ್ನು ಮುಂದುವರೆಸಿಕೊಂಡು, ಅದ್ದೂರಿಯಾಗಿ  ಆಚರಿಸುವುದರಿಂದ ಎಲ್ಲಾ ಮನಸ್ಸುಗಳು ಒಂದೆಡೆ ಸೇರುವ ಕಾರ್ಯವಾಗುತ್ತದೆ. ಈ ಬಡಾವಣೆಗೆ ಬೇಕಾದ ಮೂಲ ಸೌಕರ್ಯಗಳನ್ನು ಈಗಾಗಲೇ ದೊರಕಿಸಿದ್ದು, ಇನ್ನೂ ಹೆಚ್ಚಿನ ಯೋಜನೆಗಳನ್ನು ಒದಗಿಸಿಕೊಡುವಲ್ಲಿ ಕಾರ್ಯಪ್ರವೃತ್ತನಾಗುತ್ತೇನೆ ಎಂದು ತಿಳಿಸಿದರು. ರಸಮಂಜರಿ (ಆರ್ಕೆಸ್ಟ್ರಾ) ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಮಾರನೇ ದಿನ ಸಾಂಸ್ಕೃತಿಕ ಕಲಾತಂಡಗಳ ಮೆರವಣಿಗೆಯೊಂದಿಗೆ ನಗರದ ಅಮಾನಿಕೆರೆಯ ಕಲ್ಯಾಣಿಯಲ್ಲಿ ಶ್ರೀ ಗಣಪತಿಯನ್ನು ವಿಸರ್ಜಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಉಮೇಶ್ (ಮಾದಿಹಳ್ಳಿ), ನಗರಸಭಾ ಅಧ್ಯಕ್ಷೆ ಯಮುನಾ ಧರಣೇಶ್‌, ಸದಸ್ಯರಾದ ವಿನುತ ತಿಲಕ್ ಕುಮಾರ್ ,ಲೋಕನಾಥಸಿಂಗ್‌, ವೈದ್ಯರಾದ ಡಾ. ಮಧುಸೂಧನ್ ಮತ್ತು ಡಾ. ಸೋಮಶೇಖರ್‌, ಪ್ರಥಮ ದರ್ಜೆ ಗುತ್ತಿಗೆದಾರ ಮಧು ಪಟೇಲ್, ಬೆಸ್ಕಾಂ ತೋಂಟದಾರ್ಯ, ವೀರಶೈವ ಲಿಂಗಾಯತ ಸಂಘಟನೆ ಖಜಾಂಚಿ ದಯಾನಂದ್, ನಯಾರ ಪೆಟ್ರೋಲ್ ಬಂಕ್ ಕುಮಾರ್, ಭಾಸ್ಕರ ಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ. ಭಾಸ್ಕರ್‌, ಉಪಾಧ್ಯಾಕ್ಷರಾದ ಪ್ರಕಾಶ್‌, ನಟರಾಜ್ ಮತ್ತು ಶಿಕ್ಷಕ ನಾಗರಾಜು ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಬಡಾವಣೆಯ ನಾಗರೀಕರು ಹಾಜರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*