ಜಾತಿಗಣತಿಯಲ್ಲಿ ವಿಶ್ವಕರ್ಮ ಎಂದೇ ಬರೆಸಿ

ಭಾಸ್ಕರ ಪತ್ರಿಕೆ
0
ತಿಪಟೂರು: ತಾಲೂಕಿನ ವಿಶ್ವಕರ್ಮ ಸಮಾಜದ ಬಂಧುಗಳು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿಗಣತಿ ಗೆ ಸಮಾಜದ ಬಂಧುಗಳು ನಿಮ್ಮ ಮನೆ ಬಾಗಿಲಿಗೆ ಬಂದ ಜಾತಿ ಗಣತಿ ಅಧಿಕಾರಿಗಳಿಗೆ ಸೂಕ್ತವಾಗಿ ಮಾಹಿತಿಯಲ್ಲಿ ವಿಶ್ವಕರ್ಮ ಎಂದೇ ಬರೆಸಿ, ಈ ಸಂದರ್ಭದಲ್ಲಿ ಯಾವುದೇ ಉಪಜಾತಿಗೆ ಅಥವಾ ಪಂಗಡಗಳನ್ನು ಜಾತಿ ಗಣತಿಯಲ್ಲಿ ನಮೂದಿಸಲು ಹೇಳಬೇಡಿ ಎಂದು ವಿಶ್ವಕರ್ಮ ಜನ ಸೇವಾ ಸಂಘದ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷರಾದ ಡಾ. ಭಾಸ್ಕರಾಚಾರ್ ಹಾಗೂ ಸಮಾಜದ ತುಮಕೂರು ಜಿಲ್ಲಾಧ್ಯಕ್ಷರು ಮತ್ತು ಕಲ್ಪತರು ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಸರ್ವೇಶಾಚಾರ್ ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದು, ಇದರ ಬಗ್ಗೆ ಇದೇ ತಿಂಗಳು 21ರ ಭಾನುವಾರ ತಾಲೂಕಿನ ಬಳುವ ನೆರಳಿನ ಕಾಳಮ್ಮನ ಬೆಟ್ಟದಲ್ಲಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ರಾಜ್ಯದ್ಯಂತ ವಿಶ್ವಕರ್ಮ ಸಮಾಜದ ಬಂಧುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷರಾದ ಸರ್ವೇಶ ಆಚಾರ್ ಮನವಿ ಮಾಡಿಕೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*