ಮುಕಳೆಪ್ಪ—ಗಾಯತ್ರಿ ಪ್ರೇಮ ವಿವಾಹ ಪ್ರಕರಣ: “ಜೀವ ಬೆದರಿಕೆ ಇದೆ, ರಕ್ಷಣೆ ಕೊಡಿ”: ನ್ಯಾಯಾಧೀಶರಿಗೆ ಗಾಯತ್ರಿ ಮನವಿ

ಭಾಸ್ಕರ ಪತ್ರಿಕೆ
0

ಧಾರವಾಡ: ಯೂಟ್ಯೂಬರ್ ಮುಕಳೆಪ್ಪ ಅಲಿಯಾಸ್ ಖ್ವಾಜಾ ಶಿರಹಟ್ಟಿ ಹಾಗೂ ಗಾಯತ್ರಿ ಪ್ರೇಮ ವಿವಾಹ ಪ್ರಕರಣ ಕೆಲವು ಸಂಘಟನೆಗಳ ಮಧ್ಯ ಪ್ರವೇಶದ ನಂತರ ವಿವಾದವಾಗಿ ಪರಿಣಮಿಸಿದೆ. ಈ ನಡುವೆ ಧಾರವಾಡ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶ ವಿಚಾರಣೆ ಎದುರಿಸಿದ ಗಾಯತ್ರಿ ತನ್ನ ಹೇಳಿಕೆ ದಾಖಲಿಸಿದ್ದಾರೆ.

ಧಾರವಾಡದ ಶಕ್ತಿ ಸದನ ಕೇಂದ್ರದಿಂದ ಪೊಲೀಸರು ಗಾಯತ್ರಿ ಅವರನ್ನು ಧಾರವಾಡ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಕರೆದೊಯ್ದು ನ್ಯಾಯಾಧೀಶರ ಎದುರು ಹಾಜರುಪಡಿಸಿದರು.

ನಾನು ಸ್ವ ಇಚ್ಛೆಯಿಂದ ಖ್ವಾಜಾನನ್ನು ಮದುವೆಯಾಗಿದ್ದೇನೆ. ನನ್ನ ಪತಿ ಯಾರಿಗೂ ಜೀವ ಬೆದರಿಕೆ ಹಾಕಿಲ್ಲ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ, ಮದುವೆಯ ನಂತರವೂ ನಾನು ನನ್ನ ಪತಿ ನಮ್ಮ ತಂದೆ ತಾಯಿ ಜೊತೆ ಅನ್ಯೋನ್ಯವಾಗಿಯೇ ಇದ್ದೆವು. ನನ್ನ ತವರು ಮನೆಯವರಿಗೆ ಮದುವೆಯ ನಂತರವೂ ದುಡ್ಡು ಹಾಕಿದ್ದೇನೆ. ನನ್ನ ಪತಿ ಮತ್ತು ನನಗೆ ಜೀವ ಬೆದರಿಕೆ ಇದೆ, ನಮಗೆ ರಕ್ಷಣೆ ಕೊಡಿ ಎಂದು ಗಾಯತ್ರಿ ನ್ಯಾಯಾಧೀಶರಿಗೆ ಮನವಿ ಮಾಡಿದರು.

ಯುವತಿಯ ತಾಯಿ ಶಿವಕ್ಕಾ ಜಾಲಿಹಾಳ ಇತ್ತೀಚೆಗೆ ಮುಕಳೆಪ್ಪ ಅಲಿಯಾಸ್ ಖ್ವಾಜಾ ವಿರುದ್ಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಲವ್ ಜಿಹಾದ್ ಮಾಡಿ ತನ್ನ ಮಗಳನ್ನು ಮದುವೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*