ತಿಪಟೂರು: ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಯುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿಯ ಅವಧಿಯನ್ನು ಯಾವುದೇ ಕಾರಣಕ್ಕೂ ವಿಸ್ತರಿಸುವುದಿಲ್ಲ ಹಾಗೂ ಅಕ್ಟೋಬರ್ 7ಕ್ಕೆ ಗಣತಿ ಮುಗಿಸಿ ಎಂದು ಸಿಎಂ ಸಿದ್ದರಾಮಯ್ಯನವರು ನೆನ್ನೆ ಖಡಕ್ ಸಭೆ ಮೂಲಕ ಡಿಸಿ, ಜಿಲ್ಲಾ ಪಂಚಾಯತ್, ಸಿಇಓ, ಗಳ ಜೊತೆ ಸಭೆಯಲ್ಲಿ ತಿಳಿಸಿದ್ದಾರೆ. ರಾಜ್ಯದಲ್ಲಿ ಒಟ್ಟು ರೂ.1,43, 81, 702 ಕುಟುಂಬಗಳ ಸಮೀಕ್ಷೆ ನಡೆಸಬೇಕಾಗಿದ್ದು. ಇದುವರೆಗೆ 2,76,016 ಕುಟುಂಬಗಳ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು. ಇದು ಸರ್ಕಾರಿ ಕೆಲಸವಾಗಿದ್ದು ಯಾವುದೇ ಕಾರಣಕ್ಕೂ ನಿರ್ಲಕ್ಷ ವಹಿಸಬಾರದು. ಒಟ್ಟು 1,20728 ಗಣತಿ ದಾರರನ್ನು ನಿಯೋಜಿಸಿದ್ದು. ಒಟ್ಟು, 1,22,085 ಗಣತಿ ಬ್ಲಾಕ್ ಗುರುತಿಸಲಾಗಿದೆ. ಹಾಗೂ ನಿರ್ಲಕ್ಷ ವಹಿಸುವ ಗಣತಿ ದಾರದ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿ. ಹಾಗೂ ಶಿಕ್ಷಕರಿಗೆ ಗೌರವ ಧನದ ಬಗ್ಗೆ ಯಾವುದೇ ಅನುಮಾನ ಬೇಡ ಈಗಾಗಲೇ ಗೌರವ ಧನವನ್ನು ಬಿಡುಗಡೆ ಮಾಡಿದ್ದೇವೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಗಣತಿ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದರು ಸಭೆಯ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗಣತಿಯ ಶಿಕ್ಷಕರುಗಳಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.
ಇದರ ಬೆನ್ನಲ್ಲೇ ತಿಪಟೂರು ತಾಲೂಕಿನಲ್ಲೂ ಸಹ ಗಣತಿ ಆರಂಭವಾಗಿದ್ದು ಪ್ರತಿ ಮನೆಮನೆಗೂ ಶಿಕ್ಷಕರುಗಳು ಭೇಟಿಕೊಡುತ್ತಿದ್ದು ಕೆಲವು ಜನರು ಮನೆಗಳಲ್ಲಿ ಬಾಡಿಗೆ ಇದ್ದ ಕಾರಣ ಅಲ್ಲಿನ ಜನರು ನಾವುಗಳು ನಮ್ಮ ಊರಿಗೆ ಹೋಗಿ ಗಣತಿಗೆ ಬಗ್ಗೆ ಮಾಹಿತಿ ಕೊಡುತ್ತೇವೆ ಎಂದು ಶಿಕ್ಷಕರಿಗೆ ತಿಳಿಸಿದ್ದು . ಇದು ಸಹ ಶಿಕ್ಷಕರುಗಳಿಗೆ ಗೊಂದಲದ ಸೃಷ್ಟಿಯಾಗಿದ್ದು. ಶಿಕ್ಷಕರಿಗೆ ಮೊಬೈಲ್ ಹ್ಯಾಪ್ (ಸರ್ವರ್) ಸಮಸ್ಯೆಯಿಂದ ಗೊಂದಲ ಸೃಷ್ಟಿಯಾಗಿದ್ದು. ಒಬ್ಬ
ಶಿಕ್ಷಕರುಗಳುಗೆ 160 ಮನೆಗಳನ್ನು ಗಣತಿ ಮಾಡಲು ಹಾಕಿದ್ದು. ಸರ್ವರ್ ಸಮಸ್ಯೆಯಿಂದ ಹಾಗೂ ಕೆಲವು ಮನೆಗಳ ಬಾಗಿಲಿಗೆ ಅಂಟಿಸಿದ ಸ್ಟಿಕರ್ ಗಳು ಕಿತ್ತು ಹೋಗಿದ್ದು ನಂಬರ್ ಕಾಣದೆ ತೀವ್ರ ಸಮಸ್ಯೆಯಿಂದ ಆಮೆ ಗತಿಯಲ್ಲಿ ಸಾಗುತ್ತಿದೆ.
ಒಂದು ಮನೆಯಲ್ಲಿ ಸಮೀಕ್ಷೆ ಮಾಡಲು ಸುಮಾರು 30 ನಿಮಿಷದಿಂದ ಒಂದು ಗಂಟೆ ಬೇಕಾಗುತ್ತದೆ,
ಇಬ್ಬರೂ ಮೂವರು ಜನರಿದ್ದರೆ ಅರ್ಧ ಗಂಟೆ, ನಾಲ್ಕರಿಂದ ಎಂಟು ಜನ ರಿದ್ದರೆ ಒಂದು ಗಂಟೆ ಸಮಯ ತೆಗೆದುಕೊಳ್ಳುತ್ತದೆ ಆದರೆ ಸರ್ವರ್ ಸಮಸ್ಯೆ ಎದುರಾದರೆ ಇನ್ನು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಶಿಕ್ಷಕರು ದಿನಕ್ಕೆ ಸುಮಾರು ಸಮೀಕ್ಷೆಯನ್ನು ಐದರಿಂದ ಆರು ಮಾಡುವುದೇ ಹೆಚ್ಚಾಗುತ್ತದೆ ಎಂದು ಶಿಕ್ಷಕಿ ತಿಪಟೂರು ನಗರದ 19 ನೇ ವಾರ್ಡ್ ವಿದ್ಯಾನಗರ ಬಡಾವಣೆಯ ಹಿರಿಯ ಪತ್ರಕರ್ತರಾದ ಹಾಗೂ ವಿಶ್ವಕರ್ಮ ಸಮಾಜದ ಮುಖಂಡರಾದ ಡಾ! ಭಾಸ್ಕರ್ ಅವರ ಮನೆಯ ಗಣತಿಗೆ ಬಂದ ಶಿಕ್ಷಕಿ ಮಾಧ್ಯಮದ ಮೂಲಕ ಗಣತಿಯಲ್ಲಿ ಎದುರಿಸುತ್ತಿರುವ ಸಮಸ್ಯೆಯಗಳನ್ನ ಭಾಸ್ಕರ ಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ. ಭಾಸ್ಕರ್ ಅವರಿಗೆ ತಿಳಿಸಿದರು.
