ಬೀದರ್ ಕಾಲುವೆಗೆ ಜಿಗಿದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಭಾಸ್ಕರ ಪತ್ರಿಕೆ
0

ಬೀದರ್: ಜಿಲ್ಲೆಯ ತಂದೆ ಹಾಗೂ ಅವರ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಕಾಲುವೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಭಾಲ್ಲಿ ತಾಲೂಕಿನ ಮೂರೂರು ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಜರುಗಿದೆ.

ಬೀದರ್ ನಗರದ ಮೈಲೂರು ಬಡಾವಣೆಯ ನಿವಾಸಿಗಳಾದ ತಿಪ್ಪಣ್ಣ (ಶಿವಮೂರ್ತಿ)(45) ಅವರ ಮಕ್ಕಳಾದ ಶ್ರೀಶಾಂತ್ (9),ರಿತೀಕ್ (7) ಹಾಗೂ ರಾಕೇಶ (7 ತಿಂಗಳು) ಮೃತರು ಎಂದು ತಿಳಿದುಬಂದಿದೆ.

ಮೃತ ಶಿವಮೂರ್ತಿ ಅವರ ಪತ್ನಿ ರಮಾಬಾಯಿ ಅವರು ತಮ್ಮ ನಾಲ್ಕು ಜನ ಮಕ್ಕಳೊಂದಿಗೆ ಕಾಲುವೆಗೆ ಹಾರಿದ್ದಾರೆ ಎನ್ನಲಾಗಿದೆ ತಂದೆ ಶಿವಮೂರ್ತಿ ಹಾಗೂ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ ಪತ್ನಿ ರಮಾಬಾಯಿ (35) ಹಾಗೂ ಮಗ ಶ್ರೀಕಾಂತ್ (7) ಅವರನ್ನು ಸ್ಥಳೀಯರು ರಕ್ಷಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮೂಲತಃ ಬೀದರ್ ತಾಲೂಕಿನ ಸಂಗೊಳಗಿ ಗ್ರಾಮದವರಾದ ಶಿವಮೂರ್ತಿ ಅವರು ಹಲವು ವರ್ಷಗಳಿಂದ ಮೈಲೂರುನಲ್ಲಿ ವಾಸವಿದ್ದರು. ಮೃತ ಶಿವಮೂರ್ತಿ ಟಿ. ವಿ. ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದರು ಎಂದು ಕುಟುಂಬದ ಮೂಲಗಳಿಂದ  ತಿಳಿದು ಬಂದಿದೆ.

ಸಹೋದರರ ಆಸ್ತಿ ವಿವಾದ ಹಾಗೂ ಕೌಟುಂಬಿಕ ಕಲಹದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಧನ್ನೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

ವಿಷಯ ತಿಳಿದು ಘಟನಾ ಸ್ಥಳಕ್ಕೆ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಭಾಲ್ಕಿ ಡಿವೈಎಸ್ಪಿ ಶಿವಾನಂದ ಪವಾಡ ಶೆಟ್ಟಿ, ತಹಶೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*