ಸರಗೂರು: ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂದು ನಂಬಿರುವ ಜೆಡಿಎಸ್ ಪಕ್ಷದಿಂದ ತಾಲೂಕು ಅಭಿವೃದ್ಧಿ ಸಾಧ್ಯ ಎಂದು ಜೆಡಿಎಸ್ ಮುಖಂಡ ಕೆ.ಎಂ.ಕೃಷ್ಣನಾಯಕ ಹೇಳಿದರು.
ತಾಲೂಕಿನ ಕೋತ್ತೇಗಾಲ ಗ್ರಾಪಂ ವ್ಯಾಪ್ತಿಯ ಹಲಸೂರು ಗ್ರಾಮದಲ್ಲಿ ಮಂಗಳವಾರದಂದು ಭೇಟಿ ನೀಡಿ ಮಾರಮ್ಮನ ದೇವಸ್ಥಾನದ ಅಭಿವೃದ್ಧಿಗಾಗಿ ಒಂದು ಲಕ್ಷ ರೂ.ಗಳನ್ನು ಸಹಾಯಧನ ಹಾಗೂ 25 ಕ್ವಿಂಟಾಲ್ ಅಕ್ಕಿ ಕೊಡುವುದಾಗಿ ಭರವಸೆ ನೀಡಿ ನಂತರ ಮಾತನಾಡಿದರು.
ರಾಜ್ಯ ದಲ್ಲಿ ಪ್ರಾದೇಶಿಕ ಪಕ್ಷದಿಂದ ಮಾತ್ರ ಜನರ ಸಮಸ್ಯೆ, ರಾಜ್ಯ ಸಮಸ್ಯೆ ನಿವಾರಣೆ ಸಾಧ್ಯ. ಸಿಎಂ ಆಗಿದ್ದಾಗ ಕುಮಾರಸ್ವಾಮಿ ನೀಡಿದ ಅಭಿವೃದ್ಧಿ ಕಾರ್ಯಗಳು ಕೂಡ ಶ್ರೀರಕ್ಷೆ ಎಂದರು.
ಕ್ಷೇತ್ರದಲ್ಲಿ ಬದಲಾವಣೆ ಬೇಕಾಗಿದೆ. ಜನರ ಸೇವೆ ಮಾಡುವ ವ್ಯಕ್ತಿಗೆ ಆದ್ಯತೆ ನೀಡಿ ಎನ್ನುವ ಜಾಗೃತಿ ಮೂಡಿಸಬೇಕಾಗಿದೆ. ಈ ಹಿಂದೆ ರಾಜಕೀಯ ಮಾಡಲು ಬರುವವರು ಜನ ಸೇವೆ ನಮ್ಮ ಗುರಿ ಎನ್ನುವ ಮಾತು ಇತ್ತು. ಈಗ ದುಷ್ಟ ರಾಜಕಾರಣಿಗಳು ಈ ಮಾತು ಹಾಳು ಮಾಡಿದ್ದಾರೆ. ಜನರಿಗೆ ಅರಿವು ಮೂಡಿಸುವುದಾಗಿ ಹೇಳಿದರು.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳಿಂದ ಅಭಿವೃದ್ಧಿಯ ಪರ್ವವೇ ನಡೆಯುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಶಾಸಕ ಅನಿಲ್ ಚಿಕ್ಕಮಾದುರವರು ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ್ದಂತೆ ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರು ಮತ್ತು ಕೆರೆ–ನಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿಲ್ಲ. ಇದಲ್ಲದೆ ಪ್ರತಿಯೊಂದು ಗ್ರಾಮಗಳಲ್ಲಿನ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಬರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಪಕ್ಷದ ಮುಖಂಡ ಬೆಟ್ಟನಾಯಕ, ಪ್ರತಿಯೊಬ್ಬರ ಸಮಸ್ಯೆಗಳಿಗೂ ಸ್ಪಂದಿಸುವ ಮನೋಭಾವನೆ ಹೊಂದಿರುವುದನ್ನು ಗಮನಿಸಿ, ಅವರ ಸೇವೆ ಮೆಚ್ಚಿ ಪಕ್ಷ ಸೇರ್ಪಡೆಯಾಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಗೋಪಾಲಸ್ವಾಮಿ, ಹೆಗ್ಗನೂರು ಗ್ರಾಪಂ ಸದಸ್ಯ ಹಾಗೂ ಒಕ್ಕಲಿಗ ಸಂಘದ ತಾಲೂಕು ಅಧ್ಯಕ್ಷ ಸುಧೀರ್, ಯುವ ಮುಖಂಡರು ಚರಣ್,ಬೆಟ್ಟನಾಯಕ, ಬಾಲಾಜಿ,ಹಲಸೂರು ಗ್ರಾಮದ ಯಜಮಾನರು ರಾಜನಾಯಕರು, ಯ ಚನ್ನಾನಾಯಕರು, ಗ್ರಾಮ ಪಂಚಾಯತ್ ಸದಸ್ಯ ಮಹಾದೇವನಾಯಕ, ಪುರದಕಟ್ಟೆ ಬೆಟ್ಟನಾಯಕ,ವಾಲ್ಮೀಕಿ ಸಿದ್ದರಾಜು, ರವಿಕುಮಾರ್ ಮಾಗುಡಿಲು ಪ್ರಸಾದ್, ಮಹಾದೇವನಾಯಕ, ಮಹೇಶ್, ಕಾಂತರಾಜೆ ಅರಸ್, ಶ್ರೀ ಕಂಠ, ನಾಗರಾಜನಾಯಕ ನಾಗೇಶ್, ರಮೇಶ್, ನಿಂಗನಾಯಕ, ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.

