ತಿಪಟೂರು: ಸೆ.18 ಶ್ರೀ ಶಿವಕುಮಾರಸ್ವಾಮಿ ವೃತ್ತ (ಹಾಸನ ಸರ್ಕಲ್) ಭಾಸ್ಕರ ಪತ್ರಿಕೆಯ ಕಚೇರಿಯಲ್ಲಿ ಶ್ರೀ ಭಗವಾನ್ ವಿರಾಟ್ ವಿಶ್ವಕರ್ಮ ಜಯಂತಿ ಪೂಜೆ ಮಹೋತ್ಸವ ಹಾಗೂ ನಮ್ಮ ನೆಚ್ಚಿನ ಪ್ರಧಾನಮಂತ್ರಿಯಾದ ನರೇಂದ್ರ ಮೋದಿಜಿ ಅವರ 75ನೇ ವರ್ಷದ ಹುಟ್ಟುಹಬ್ಬ ಹಾಗೂ ಭಾಸ್ಕರ ಟಿವಿ ಯುಟ್ಯೂಬ್ ಚಾನೆಲ್ ಐದನೇ ವರ್ಷದ ವಾರ್ಷಿಕೋತ್ಸವವನ್ನು ಹಿರಿಯ ಪತ್ರಕರ್ತರಾದ ಡಾ. ಭಾಸ್ಕರಾಚಾರ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು, ಈ ಸಂದರ್ಭದಲ್ಲಿ ಎಲ್ಐಸಿ ನಿವೃತ್ತ ಅಧಿಕಾರಿ ಜಯದೇವಪ್ಪ, ಚೆನ್ನವೀರೇಗೌಡ, ಶಿಕ್ಷಕ ಹನುಮಂತಪ್ಪ, ಶಂಕರಪ್ಪ, ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ ರಿಜಿಸ್ಟರ್ ಕೇರಳ ಸಂಘದ ಅಧ್ಯಕ್ಷ ಬೆಣ್ಣೆನಹಳ್ಳಿ ರಾಜು, ಕಾರ್ಯದರ್ಶಿ ಮಂಜುನಾಥ್, ಕುಮಾರಿ ಲೇಖನ, ಶ್ರೀಮತಿ ಲತಾ ಹಾಗೂ ಶ್ರೀಮತಿ ಶುಭ ವಿಶ್ವಕರ್ಮ ಹಾಜರಿದ್ದರು.
ಈ ವೇಳೆ ಡಾ. ಭಾಸ್ಕರಾಚಾರ್ ರವರು ಮಾತನಾಡಿ ತಾಲೂಕಿನ ನೊಣವಿನಕೆರೆಯ ಲೇಖನ ಎಂಬ ಪುಟ್ಟ ಬಾಲಕಿ ಅಸಾಮಾನ್ಯ ನೆನಪಿನ ಶಕ್ತಿ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸಾಧನೆ ಮಾಡಿದ್ದು, ನಮ್ಮ ತಾಲೂಕಿಗೆ ಹೆಮ್ಮೆ ತಂದಿದೆ ಹಾಗೆ ಮುಂದಿನ ದಿನಗಳಲ್ಲಿ ಈ ಪುಟ್ಟ ಬಾಲಕಿಗೆ ಇನ್ನು ಹೆಚ್ಚು ಹೆಚ್ಚು ಪ್ರಶಸ್ತಿ ಲಭಿಸಲಿ ವಿದ್ಯಾಭ್ಯಾಸವು ಮುಂದುವರೆಯಲಿ ಎಂದು ಹಾರೈಸಿದರು
ಗೌರವ ಪೂರ್ವಕವಾಗಿ ಲೇಖನಾಳಿಗೆ ಸನ್ಮಾನಿಸಿದರು, ಈ ಸಂದರ್ಭದಲ್ಲಿ ಸಿಹಿಯನ್ನು ವಿತರಿಸಲಾಯಿತು. ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.
