ಶ್ರೀರಂಗಪಟ್ಟಣ: ತಾಲ್ಲೂಕಿನ ಹೊಸ ಉಂಡವಾಡಿ ಗ್ರಾಮದ ಶ್ರೀ ಕಾಳಕಾಂಭ ಅಮ್ಮನವರ ದೇವ ಸ್ಥಾನದಲ್ಲಿ ನಡೆದ 'ಶ್ರೀವಿರಾಟ್ ವಿಶ್ವಕರ್ಮ ಜಯಂತೋತ್ಸವ' ಸಂದರ್ಭ ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷರು ಹಾಗೂ ಪತ್ರಕರ್ತರಾದ ಭಾಸ್ಕರಾಚಾರ್ ತಿಪಟೂರು ರವರಿಗೆ 'ವಿಶ್ವಕರ್ಮ ರತ್ನ ಪ್ರಶಸ್ತಿ' ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ನಾರಾಯಣಚಾರ್, ಮಜ್ಜಿಗೆಪುರ ಚಲುವಚಾರ್,ಶಿವರಾಮು, ಯುವ ಮುಖಂಡ ಮಹೇಶ್ ದಾಸೇಗೌಡ, ಪತ್ರಕರ್ತ ಹೆಚ್.ವಿ.ಪುಟ್ಟಸ್ವಾಮಿ ಇದ್ದರು.
