ತಿಪಟೂರು: ನಗರದಲ್ಲಿನ ಶ್ರೀ ಶಂಕರ ವೀರಭದ್ರೇಶ್ವರ ಸೌಹಾರ್ದ ಪತ್ತಿನ ಸಹಕಾರ ಸಂಘದ ವತಿಯಿಂದ ವಾರ್ಷಿಕ ಸಮಾರಂಭ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿರಕ್ತ ಮಠ ಕುಪ್ಪೂರು ತಮಡಿಹಳ್ಳಿ ಶಾಖೆಯ ಡಾ. ಅಭಿನವ ಮಲ್ಲಿಕಾರ್ಜುನ ದೇಶೀಕೇಂದ್ರ ಸ್ವಾಮೀಜಿಯವರು ಅವರು, ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ದೇಶದಲ್ಲಿ ಜಿ.ಎಸ್.ಟಿ. ಕಡಿತಗೊಳಿಸಿರುವುದು ಸ್ವಾಗತ ಕಾರ್ಯ ಇದರಿಂದ ಬಡವರಿಗೆ ತುಂಬಾ ಅನುಕೂಲವಾಗುತ್ತದೆ. ನಮ್ಮ ದೇಶದ ಸುಭದ್ರತೆಗಾಗಿ ಮೋದಿ ಅವರ ಕೊಡುಗೆ ಅಪಾರ. ದೇಶ ನಮಗೆ ಏನು ಕೊಟ್ಟಿದೆ ಅನ್ನೋದು ಮುಖ್ಯವಲ್ಲ ನಾವು ದೇಶಕ್ಕಾಗಿ ನಾವು ಏನು ಕೊಟ್ಟು ಹೋಗುತ್ತೇವೆ ಅನ್ನೋದು ಮುಖ್ಯ. ಇದೇ ಸಂದರ್ಭದಲ್ಲಿ ತಿಪಟೂರು ತಾಲೂಕಿನ ಲೇಖನ ಎಂಬ ಪುಟ್ಟ ಬಾಲಕಿ ಅಸಮಾನ್ಯ ನೆನಪಿನ ಶಕ್ತಿ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸಾಧನೆ ಮಾಡಿದ್ದು ನಮ್ಮ ತಾಲೂಕಿಗೆ ಹೆಮ್ಮೆ ತಂದಿದೆ. ಹಾಗೆ ಮುಂದಿನ ದಿನಮಾನಗಳಲ್ಲಿ ಪುಟ್ಟ ಬಾಲಕಿಗೆ ಇನ್ನು ಹೆಚ್ಚು ಹೆಚ್ಚು ಪ್ರಶಸ್ತಿ ಲಭಿಸಲಿ ಎಂದು ಹಾರೈಸಿ. ಗೌರವ ಪೂರ್ವಕವಾಗಿ ಸನ್ಮಾನಿದರು. ನಂತರ ಚೌಡೇಶ್ವರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಸೋಮಶೇಖರ್ ಅವರು ಮಾತನಾಡಿ ಸಂಸ್ಥೆಗಳ ಕಾರ್ಯಕ್ರಮದಲ್ಲಿ ನಾವೆಲ್ಲರೂ ಒಂದೇ ರೀತಿಯಲ್ಲಿ ಒಟ್ಟಾಗಿ ಇರುತ್ತೇವೆ. ಸಹಕಾರ ಸಂಘದ ದೇಶದ ಆರ್ಥಿಕ ಸುಭದ್ರತೆ ಅಡಿಪಾಯವನ್ನು ದೊರಕಿಸಿಕೊಟ್ಟಿದೆ. ಗ್ರಾಮೀಣ ಪ್ರದೇಶದ ಆರ್ಥಿಕತೆಯನ್ನು ಹೊಂದಿರುವ ಭಾರತಕ್ಕೆ ಬ್ಯಾಂಕುಗಳ ಕೊಡುಗೆ ಅಪಾರವಾಗಿದೆ ಎಂದು ಮೆಚ್ಚುಗೆ ಮಾತುಗಳನ್ನಾಡಿದರು.
ಶ್ರೀ ಶಂಕರ ವೀರಭದ್ರೇಶ್ವರ ಸೌಹಾರ್ದ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ದಕ್ಷಿಣ ಮೂರ್ತಿ ಮಾತನಾಡುತ್ತಾ ಬಡವರಿಗೆ ನೊಂದವರಿಗೆ ಸೋರಿಲ್ಲದವರಿಗೆ ಸಹಕಾರ ಸಂಘ ಕಾರ್ಯಗಳನ್ನು ನಿರ್ವಹಿಸುತ್ತಿದ್ದು ಸದಸ್ಯರುಗಳು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಮುಂದೇನು ಸಹ ಶ್ರೀ ಶಂಕರ ವೀರಭದ್ರೇಶ್ವರ ಸೌಹಾರ್ದ ಪತ್ತಿನ ಸಹಕಾರ ಸಂಘಕ್ಕೆ ಸದಸ್ಯರು ಹೀಗೆ ಸದಾ ಪ್ರೋತ್ಸಾಹ ಕೊಡಬೇಕೆಂದರು. ನಿಮ್ಮ ಪ್ರೋತ್ಸಾಹ ಸಹಕಾರದಿಂದ ಈ ಸಂಘ 12 ವರ್ಷ ಕಳೆದಿದೆ ಎಂದರು.
ಇದೇ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ವಹಿಸಿರುವ ಶ್ರೀ ಶ್ರೀ ಶ್ರೀ ಡಾ. ಅಭಿನವ ಮಲ್ಲಿಕಾರ್ಜುನ ದೇಶೀ ಕೇಂದ್ರ ಸ್ವಾಮೀಜಿ ಅವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ನಂತರ ಹಿರಿಯ ಸದಸ್ಯರು ಮತ್ತು ಸಂಘದ ಅನೇಕ ಸದಸ್ಯರುಗಳನ್ನು ಸನ್ಮಾನಿಸಿ ಅಭಿನಂದಿಸಿದರು. 2024- 25 ನೇ ಸಾಲಿನ ಆಡಿಟ್ ವರದಿ, ಜಮಾ-ಖರ್ಚು, ಲಾಭ ನಷ್ಟ, ತಿಳಿಸಲಾಯಿತು. ಮಡೆನೂರು ಸೋಮಶೇಖರ್ ನಿರೂಪಣೆ ಮಾಡಿದರು. ಸಂಘದ ಉಪಾಧ್ಯಕ್ಷರಾದ ಗಂಗಾಧರಯ್ಯ ವಂದನಾರ್ಪಣೆ ಮಾಡಲಾಯಿತು. ಯೋಗೀಶ್ , ಸಿದ್ದರಾಮಯ್ಯ, ತ್ರಿಯಂಬಕ, ರಾಜಣ್ಣ, ಮಧುಸೂದನ್ ಹಾಗೂ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಬಿ. ಎಂ. ಮನು . ನಿರ್ದೇಶಕರುಗಳು ಮತ್ತು ಕಾರ್ಯದರ್ಶಿಗಳು ಮತ್ತಿತರರು ಉಪಸ್ಥಿತರಿದ್ದರು.
ವರದಿ: ಮಂಜುನಾಥ್ ಡಿ, ತಿಪಟೂರು
