ಶ್ರೀ ಸೃಜನಶೀಲ ಪತ್ತಿನ ಸಹಕಾರ ಸಂಘ (ರಿ) ತಿಪಟೂರು ಹಾಗೂ ಪ್ರಗತಿಪರಗೃಹ ನಿರ್ಮಾಣ ಸಹಕಾರ ಸಂಘ (ನಿ) ತಿಪಟೂರು ಸಹಕಾಲಿಕ 2024-25 ನೇ ಸಾಲಿನ ವಾರ್ಷಿಕ ಮಹಾಸಭೆ

ಭಾಸ್ಕರ ಪತ್ರಿಕೆ
0

 


ತಿಪಟೂರು: ಶ್ರೀ ಸೃಜನಶೀಲ ಪತ್ತಿನ ಸಹಕಾರ  ಸಂಘ (ರಿ) ತಿಪಟೂರು ಹಾಗೂ  ಪ್ರಗತಿಪರಗೃಹ ನಿರ್ಮಾಣ ಸಹಕಾರ ಸಂಘ  (ನಿ)  ತಿಪಟೂರು ಸಹಕಾಲಿಕ 2024-25 ನೇ ಸಾಲಿನ ವಾರ್ಷಿಕ  ಮಹಾಸಭೆಯನ್ನು ದಿನಾಂಕ 14-9-2025 ಭಾನುವಾರದಂದು ಸಮಯ 12:00ಕ್ಕೆ ಶ್ರೀ ಎಂ.ವಿ ಸೀತಾರಾಮಯ್ಯ ಶತಮಾನೋತ್ಸವ ಭವನ ಕೆಆರ್ ಬಡಾವಣೆ, ತಿಪಟೂರು ಇಲ್ಲಿ ಆಯೋಜಿಸಲಾಗಿತ್ತು.

 ಶ್ರೀ ಎಸ್ ಜಯಣ್ಣ ವಕೀಲ ಹಾಗೂ ನೋಟರಿ ಕ್ಲಬ್ ತಿಪಟೂರು ಸಹಕಾರ ಸಂಘದ ಅಧ್ಯಕ್ಷರು ಇವರ ನೇತೃತ್ವದಲ್ಲಿ ಶ್ರೀ ಶ್ರೀ ರುದ್ರಮುನಿ ಮಹಾಸ್ವಾಮೀಜಿಗಳು  ಶ್ರೀ ಷಡಕ್ಷರ ಮಠ ಇವರ ಘನ ಅಧ್ಯಕ್ಷತೆಯಲ್ಲಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

 ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಅಧ್ಯಕ್ಷರಾದ ಅಜೇಯ ಹಾಗೂ ಕಾರ್ಯದರ್ಶಿ, ಮಲ್ಲಿಕಾರ್ಜುನ್ ಮತ್ತು ವಕೀಲೆ ಲಕ್ಷ್ಮಿ  ಸೋಲಂಕಿ,  ವಕೀಲೆ ಶೋಭಾ ಜಯದೇವ್,  ಶ್ರೀಮತಿ ಎಂ.ಜಿ ಮೀನಾ ಉಪಾಧ್ಯಕ್ಷರು ಪರಂಶುಪಾಲರಾದ ಎಂ.ಡಿ ಶಿವಕುಮಾರ್, ಬಿಜೆಪಿ ಮುಖಂಡ ಹಾಗೂ ವಕೀಲರಾದ ಕಟ್ಟಿಗೆನಹಳ್ಳಿ ಸದಾಶಿವಪ್ಪ,  ಎಂ.ಡಿ ಮಹದೇವಪ್ಪ  ಮುಂತಾದವರು ಭಾಗವಹಿಸಿದ್ದರು.

 ಪ್ರಸ್ತಾವಿಕ ನುಡಿಗಳನ್ನು ಎಂ. ಡಿ ಶಿವಕುಮಾರ್ ಅವರು ಮಾತನಾಡುತ್ತಾ  ಪತ್ತಿನ ಸಹಕಾರ ಸಂಘದಿಂದ ಅನೇಕ ಸಾಮಾನ್ಯ ಜನರಿಗೆ ಬಹಳಷ್ಟು ಉಪಯೋಗವಿದೆ ಅದರ ಬಗ್ಗೆ ಕೆಲವರಿಗೆ ಮಾಹಿತಿ ತಿಳಿದಿರುವುದಿಲ್ಲ ಪ್ರತಿ ತಿಂಗಳು ಆರ್ ಡಿ ಮತ್ತು ಪಿಗ್ಮಿ ಕಟ್ಟಿ ಉಳಿತಾಯ ಮಾಡಿದ ಹಣದಿಂದ ಹಲವಾರು ಸಮಸ್ಯೆಗಳು ಬಗೆಹರಿಯುತ್ತವೆ,  ಇಂತಹ ವಿಚಾರಗಳನ್ನು ಯುವಕರಿಗೆ ತಿಳಿಸಿ ಅರಿವು ಮೂಡಿಸಬೇಕೆಂದರು, ವಕೀಲರಾದ ಅಜಯ್ ರವರು ಮಾತನಾಡಿ ನಮ್ಮ ಅಧ್ಯಕ್ಷ ಜಯಣ್ಣನವರು ಶ್ರೀ ಸೃಜನಶೀಲ ಮತ್ತು ಪ್ರಗತಿಶೀಲ ಸಹಕಾರ ಸಂಘವನ್ನು ಕಟ್ಟಿದ ಮೇಲೆ ನಮ್ಮ ಮಕ್ಕಳಿಗೆ ಶಾಲೆ ಫೀಸ್ ಕಟ್ಟಲು ಬಹಳ ಸಹಕಾರಿಯಾಗಿದೆ,  ಒಂದು ರೀತಿಯಲ್ಲಿ ಸಹಕಾರ ಸಂಘಗಳನ್ನು ಬೆಳೆಸಿ ಉಳಿಸಬೇಕೆಂದು ಸಲಹೆ ನೀಡಿದರು,  ಎರಡು ಸಂಘದ ವಾರ್ಷಿಕ ಚಟುವಟಿಕೆಗಳ ಲೆಕ್ಕದ ವರದಿಯನ್ನು ಶ್ರೀಮತಿ ಭಾಗ್ಯ ಎಂ ಹಾಗೂ ಶ್ರೀಮತಿ ಮಾಲಾ.ವಿ ( ಕಾರ್ಯನಿರ್ವಹಣಾಧಿಕಾರಿಗಳು)  ಮಂಡಿಸಿದರು.

 ನಂತರ ಹಿರಿಯ ಮಾಜಿ   ಸದಸ್ಯರು ಹಾಗೂ ನಿರ್ದೇಶಕರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು, . ನಿರೂಪಣೆ  ಮತ್ತು ವಂದನಾರ್ಪಣೆಯನ್ನು ಶೋಭಾ ಜಯದೇವ್ ರವರು ನೆರವೇರಿಸಿದರು ಕೊನೆಯಲ್ಲಿ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದ್ದು ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*