ಗಂಗಾವತಿ: ಅಪರಿಚಿತರಿಂದ ವೃದ್ಧನಿಗೆ ಅಪಘಾತ – ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು

ಭಾಸ್ಕರ ಪತ್ರಿಕೆ
0

Gangavathi: Elderly man injured in accident by stranger – locals admitted to hospital

ಗಂಗಾವತಿ ನಗರದಲ್ಲಿ ಅಜ್ಞಾತ ವಾಹನದ ಡಿಕ್ಕಿಯಿಂದ ಒಬ್ಬ ವೃದ್ಧ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತ ಮಾಡಿದವರು ಸ್ಥಳದಿಂದಲೇ ಪರಾರಿಯಾಗಿದ್ದಾರೆ. ಗಾಯಗೊಂಡ ವೃದ್ಧರ ಬಗ್ಗೆ ಅವರ ಹೆಸರು, ಮೂಲ ಸ್ಥಳ ಇನ್ನೂ ಪತ್ತೆಯಾಗಿಲ್ಲ.

ಘಟನೆಯ ನಂತರ ಸ್ಥಳೀಯರು ತಕ್ಷಣ ಗಂಗಾವತಿ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಗಾಯಾಳುವರ ಕುರಿತು ಮಾಹಿತಿ ಕೇಳಿದಾಗ ಯಾರೂ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ.

ಈ ಹಿನ್ನೆಲೆಯಲ್ಲಿ ಸ್ಥಳೀಯರು ಮಾಧ್ಯಮದ ಮುಂದೆ ಮಾತನಾಡಿ, “ಯಾರು ಈ ವೃದ್ಧರು, ಎಲ್ಲಿಂದ ಬಂದಿದ್ದಾರೆ ಎಂಬ ಮಾಹಿತಿ ತಿಳಿದವರು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ, ಸಂಬಂಧಿಕರು ಇವರನ್ನು ಕರೆದುಕೊಂಡು ಹೋಗುವಂತೆ” ಮನವಿ ಮಾಡಿದ್ದಾರೆ.

ಸಂಬಂಧಿಸಿದವರು ಮಾಹಿತಿ ಪಡೆದು ಗಂಗಾವತಿ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ತಕ್ಷಣ ಸಂಪರ್ಕಿಸುವಂತೆ ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*