ಬೆಂಗಳೂರು: ಶಾಸಕರ ಭವನದ ವಿಧಾನ ಪರಿಷತ್ ಸಭಾಂಗಣದಲ್ಲಿ ವಿಶ್ವಕರ್ಮ ಸಮಾಜದ ಕುಂದು ಕೊರತೆಗಳ ಬಗ್ಗೆ ಮಾನ್ಯ ಸಚಿವರಾದ ಧಾರ್ಮಿಕ ಧತ್ತಿನಿಧಿ ಇಲಾಖೆಯ ಶ್ರೀ ಕೋಟಾ ಶ್ರೀನಿವಾಸಪೂಜಾರಿ ರವರನ್ನು ಸಭೆಗೆ ಆಹ್ವಾಸಿದ್ದು ಶ್ರೀ ಕೆಪಿ ನಂಜುಂಡಿ ವಿಶ್ವಕರ್ಮ ಹಾಗೂ ಶ್ರೀ ರಘುಆಚಾರ್ ರವರ ನೇತೃತ್ವದಲ್ಲಿ 5 ವರ್ಷಗಳ ಹಿಂದೆ ಕರೋನ ಸಂಧರ್ಭದಲ್ಲಿ ಸಭೆ ಕರೆಯಲಾಗಿದ್ದು ಅಂದಿನ ಸಭೆಯಲ್ಲಿ ಸಮಾಜದ ಹಿರಿಯ ನಾಯಕರಾದ ಶ್ರೀ ಭಾಸ್ಕರಾಚಾರ್ ಪತ್ರಕರ್ತರು ತಿಪಟೂರು ಮತ್ತು ಶ್ರೀ ಕನ್ನಡಸೋಮು, ಹೋರಾಟಗಾರರು ಹಾಗೂ ಸಮಾಜದ ಬಂಧುಗಳು ಭಾಗವಹಿಸಿದ್ದು ಕೆಲವು ನಮ್ಮ ಧಾರ್ಮಿಕ ಕ್ಷೇತ್ರಗಳು ಹಾಗೂ ವಿವಿಧ ಸಮಾಜದ ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚೆ, ವಿಶ್ಲೇಷಣೆ ಮಾಡಿ ಭಾಗವಹಿಸಿದ್ದ ಒಂದು ನೆನಪು ನಿರಂತರ ಚಟುವಟಿಕೆ ಸಮಾಜದ ಪರವಾದ ಹೋರಾಟ ಅಗತ್ಯ.
ನಮ್ಮಗಳ ಮುಂದಿನ ನಡೆ ಎಸ್ಟಿ ಮೀಸಲಾತಿಗಾಗಿ ಹೋರಾಟ ಮಾಡೋಣ ಈಗಾಗಲೇ ಹಿಂದುಳಿದ ವರ್ಗಗಳಲ್ಲಿರುವ 15% ಮೀಸಲಾತಿಯಲ್ಲಿ 3% ಒಳ ಮೀಸಲಾತಿ ಕೇಳಿ 20 ವರ್ಷಗಳು ಕಳೆದಾಗಿದೆ ಅದಾವುದಕ್ಕೂ ಗಮನ ಹರಿಸದ ಸರ್ಕಾರಕ್ಕೆ ಸೆಡ್ಡು ಹೊಡೆದು ಎಸ್ಟಿ ವರ್ಗದ ಮೀಸಲಾತಿಯಲ್ಲಿ ಶಿಕ್ಷಣ, ಉದ್ಯೋಗ ಕ್ಕಾಗಿ ಹೆಚ್ಚಿನ ಅನುದಾನ ಸಂವಿದಾನ ಹಕ್ಕಿನಲ್ಲಿ ನೀಡಬೇಕೆಂದು ಹೋರಾಟಕ್ಕೆ ಅಣಿಯಾಗೋಣ ಯಾರು ಮನೆ ಬಾಗಿಲಿಗೆ ಬಂದು ಅವಕಾಶ ನೀಡುವುದಿಲ್ಲ.
ಕುಲಶಾಸ್ತ್ರ ಅಧ್ಯಯನ ನಡೆಯುತ್ತಿದ್ದು ಜೊತೆಗೆ ಜಾತಿವಾರು ಜಾತಿ ಜನಗಣತಿ ನಡೆಯುತ್ತಿದ್ದು ನಮ್ಮ ಭವಿಷ್ಯ ನಾವೇ ಬರೆದುಕೊಳ್ಳೋಣ ಶ್ರೀ ಕೆ ಪಿ ನಂಜುಂಡಿ ವಿಶ್ವಕರ್ಮ ರವರ ಕೖ ಜೋಡಿಸಿ ಬೆಂಬಲಿಸಿ ನಡೆಯೋಣ ಬನ್ನಿ ಚಿಂತಿಸಿ ಪಲವಿಲ್ಲ ಪ್ರಯತ್ನವೇ ಸಾಧನೆಯ ಪ್ರತೀಕ🙏ಜೈ ವಿಶ್ವಕರ್ಮ
