ಮೈಸೂರು ದಸರಾಕ್ಕೆ ಬಲೂನ್ ಮಾರಲು ಬಂದಿದ್ದ ಬಾಲಕಿ ಶವವಾಗಿ ಪತ್ತೆ: ಅತ್ಯಾಚಾರದ ಶಂಕೆ

ಭಾಸ್ಕರ ಪತ್ರಿಕೆ
0

ಮೈಸೂರು: ಮೈಸೂರು ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ಬಲೂನ್ ಮಾರಲು ಬಂದಿದ್ದ ಬಾಲಕಿಯ ಶವ ಪತ್ತೆಯಾಗಿದೆ.

ವರದಿಗಳ ಪ್ರಕಾರ, ದೊಡ್ಡಕೆರೆ ಮೈದಾನದ ಸುತ್ತಮುತ್ತಲಿನ ರಸ್ತೆಯಲ್ಲಿ ದಸರಾ ವ್ಯಾಪಾರಕ್ಕಾಗಿ ವ್ಯಾಪಾರಿಗಳು ಬಂದು ನೆಲೆಸಿದ್ದರು. ಬುಧವಾರ ಚಾಮುಂಡೇಶ್ವರಿ ದೇವಾಲಯದ ತೆಪ್ಪೋತ್ಸವ ಮುಗಿಸಿ, ಗುರುವಾರ ಬೇರೆಡೆಗೆ ತೆರಳಲು ಸಿದ್ಧತೆ ನಡೆಸಿದ್ದರು.

ರಾತ್ರಿ ವ್ಯಾಪಾರ ಮುಗಿಸಿ ಬಂದಿದ್ದ ಗುಲ್ಬರ್ಗಾ ಮೂಲದ ಸುಮಾರು 10ರಿಂದ 12 ವರ್ಷದ ಬಾಲಕಿ ತಂದೆ ತಾಯಿಯೊಂದಿಗೆ ಮಲಗಿದ್ದಳು. ಮುಂಜಾನೆ ಮಳೆ ಬಂದ ವೇಳೆ ಎಲ್ಲರೂ ಎದ್ದಿದ್ದರು. ಈ ವೇಳೆ ಬಾಲಕಿ ನಾಪತ್ತೆಯಾಗಿದ್ದಳು ಎಂದು ತಿಳಿದು ಬಂದಿದೆ.

ಬಳಿಕ ಹುಡುಕಾಟ ನಡೆಸಿದ ವೇಳೆ ಟೆಂಟ್ ನಿಂದ 50 ಮೀ. ದೂರದಲ್ಲಿರುವ ಮಣ್ಣಿನ ರಾಶಿ ಬಳಿ ಬಾಲಕಿಯ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಸ್ಥಳಕ್ಕೆ ಶ್ವಾನ ದಳ ಆಗಮಿಸಿದ್ದು, ಪೊಲೀಸರು ಸಿಸಿ ಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*