ತಿಪಟೂರು: ವಿಶ್ವಕರ್ಮ ಸಮಾಜ ಮುಖಂಡರಾದ ಕೆ.ಪಿ.ನಂಜುಂಡಿ ವಿಶ್ವಕರ್ಮ ಹಾಗೂ ಅದೇ ಸಮುದಾಯದ ವಿಶ್ವಕರ್ಮ ಸಮಾಜದ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿಯವರು, ಶ್ರೀ ನೀಲಕಂಠ ಸ್ವಾಮೀಜಿ, ರಾಮಚಂದ್ರ ಸ್ವಾಮೀತಿ (ಒಕ್ಕೂಟದ ಅಧ್ಯಕ್ಷರು) ಹಾಗೂ ಎಲ್ಲ ಪದಾಧಿಕಾರಿಗಳು ಒಂದಾಗಿದ್ದು ವಿಶ್ವಕರ್ಮ ಸಮಾಜಕ್ಕೆಆನೆಬಲ ಬಂದಂತಾಯಿತು ಎಂದು ವಿಶ್ವಕರ್ಮ ಜನಸೇವಾ ಸಂಘದ ಪ್ರಚಾರ ಸಮಿತಿ ಅಧ್ಯಕ್ಷರಾದ ಡಾ. ಭಾಸ್ಕರ್ ಚಾರ್ ಅಭಿಪ್ರಾಯ ಪಟ್ಟರು.
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಮಟ್ಟದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಸಂಘಟನಾ ಶಕ್ತಿಗೆ ಆನೆ ಬಲ "ಇತಿಹಾಸ ಮರುಶೃಷ್ಟಿ ಬಂದಂತಾಯಿತು.
ನವ ವಿಶ್ವಕರ್ಮ ಸಮಾಜದ ನಿರ್ಮಾಣಕ್ಕಾಗಿ, ವಿಶ್ವಕರ್ಮರ ಅವತಾರ ಪುರುಷ, ವಿಶ್ವಕರ್ಮ ಸಮಾಜದ ಸಂಘಟನಾ ಸಾಮ್ರಾಟ,ಅದ್ವಿತೀಯ ನಾಯಕ, ಛಲದಂಕ ಮಲ್ಲ, ಸಂಘಟನೆಯ ಚಕ್ರವರ್ತಿ ತಮ್ಮ ಆಯುಷ್ಯವನ್ನೇ ಧಾರೆಯೆರಿದ ಯುಗ ಪುರುಷ, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ , ಸಂಸ್ಥಾಪಕ ರಾಜ್ಯಾಧ್ಯಕ್ಷರು , ಮಾಜಿ ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ಕೆ. ಪಿ. ನಂಜುಂಡಿ ವಿಶ್ವಕರ್ಮ ರವರ ಮನೆಗೆ ದಿನಾಂಕ 08.10.2025* ವಿಶ್ವಕರ್ಮ ಸಮಾಜದ ಪ್ರಮುಖ ಪರಮಪೂಜ್ಯ ಸ್ವಾಮೀಜಿಗಳು ಭೇಟಿ ನೀಡಿ* ,ಆಶೀರ್ವಾದ ಮಾಡಿ ಭವಿಷ್ಯದ ವಿಶ್ವಕರ್ಮ ಸಮಾಜದ ಸಂಘಟನೆಗೆ, ಇನ್ನಷ್ಟು ಬಲ ತುಂಬಲು ನಿಮ್ಮ ಜೊತೆ ಸದಾ ನಾವಿರುತ್ತೇವೆ ಎಂದು ಹೊಸಕ್ರಾಂತಿಗೆ ನಾಂದಿ ಹಾಡಿದ ಸ್ವಾಮೀಜಿಗಳು ನಾವು ನೀವು ಸೇರಿ, ಅಂದರೆ ಖಾದಿ ಮತ್ತು ಕಾವಿ ಜೊತೆಗೂಡಿ ನವ ವಿಶ್ವಕರ್ಮ ಸಮಾಜದ ನಿರ್ಮಾಣಕ್ಕೆ ಮುನ್ನುಗ್ಗೊಣ ಎಂಬ ಸಂಕೇತವೆ, ನಮ್ಮ ರಾಜ್ಯಾಧ್ಯಕ್ಷರೊಂದಿಗೆ ಪರಮ ಪೂಜ್ಯರುಗಳ ಈ ಮರು ಮಿಲನ ಸಮಾಜದ ಏಳಿಗೆಯ ಬೆಳಕಾಗಿ ಮುಂದಿನ ವಿಶ್ವಕರ್ಮ ಸಮಾಜದ ಮುಂದಿನ ದಿನಮಾನಗಳಲ್ಲಿ ಯಶಸ್ವಿಯ ಹಾದಿಯಲ್ಲಿ ಮುನ್ನುಗ್ಗುವ ಮುನ್ಸೂಚನೆಯಂತೆ ಒಂದುಗೂಡಿಸಿದ ಶ್ರೀಮತಿ ವಸಂತ ಮುರಳಿ ಅವರಿಗೆ ಸಮಾಜದ ಯುವ ಮುಖಂಡ ರಿಷಿ-ಮೈಸೂರು, ದಿವಾಕರ್, ಶ್ರೀಮತಿ ಲಕ್ಷ್ಮಿ ನಂಜುಂಡಿ ವಿಶ್ವಕರ್ಮ, ಇವರ ನೇತೃತ್ವದಲ್ಲಿ ಮುನಿಸು ಮರೆತು ಸೌಹಾರ್ದತೆಯಿಂದ ಒಂದಾದರು.
