ಪುತ್ತೂರು: ಬಿಜೆಪಿ ಮುಖಂಡನ ಪುತ್ರನ ಪ್ರೇಮ ವಂಚನೆ ಪ್ರಕರಣದ ಆರಂಭದಲ್ಲಿ ಪುತ್ತೂರಿನ ಕೃಷ್ಣರಾವ್ ನ ಕುಟುಂಬ ಮದುವೆಗೆ ಒಪ್ಪಿಕೊಂಡಿತ್ತು. ಹೀಗಾಗಿ ಕೇಸು ದಾಖಲಿಸುವುದು ಬೇಡ ಎಂದು ಶಾಸಕರೇ ಹೇಳಿರುವುದಾಗಿಯೂ ವರದಿಯಾಯಿತು. ತಾಯಿಯೂ ಅಷ್ಟೇ , ಮಾಸ್ಕ್ ಹಾಕಿಯೇ ಮಾತಾಡಿದ್ರು. ಆದರೆ ಬರಬರುತ್ತಾ ಎಲ್ಲವೂ ಬದಲಾಯಿತು. ಕೃಷ್ಣರಾವ್ ಮದುವೆಗೆ ಒಪ್ಪಿಕೊಳ್ಳಲಿಲ್ಲ. ಮಗುವೇ ತನ್ನದಲ್ಲ ಎಂದು ಹೇಳಿದ. ಪ್ರಕರಣ ದಾಖಲಾದಾಗ ಮೈಸೂರಲ್ಲಿ ಅಡಗಿ ಕುಳಿತ. ಇತ್ತ ಶಾಸಕರೂ ಕೈ ಚೆಲ್ಲಿದ್ರು. ಆ ತಾಯಿಗೆ ಭರವಸೆಯಾಗಿ ಉಳಿದಿದ್ದ ಉಳಿದ ನಾಯಕರೂ ಕೈಕೊಟ್ರು. ಮಗಳು ಮಗುವಿಗೆ ಜನ್ಮ ನೀಡಿದಳು. ಎಲ್ರೂ ಮೋಸ ಮಾಡ್ತಿದ್ದಾರೆ ಎಂದು ಅನಿಸಿದಾಗ ಆ ತಾಯಿ ಮಾಸ್ಕನ್ನೇ ಕಿತ್ತೆಸೆದ್ರು. ನಂಬಿದವರೇ ಕೈ ಕೊಟ್ರು ಎಂಬ ನೋವಿನೊಂದಿಗೆ ಮತ್ತೆ ಮಾಧ್ಯಮಗಳ ಮುಂದೆ ಬಂದ್ರು.
"ಈಗ ಡಿಎನ್ಎ ಪರೀಕ್ಷೆಯ ಫಲಿತಾಂಶವೂ ಬಂದಿದೆ, ನಾನು ಹಿಂದೂ ಸಮುದಾಯದಲ್ಲಿಯೇ ಹುಟ್ಟಿದ್ದೇನೆ, ಯಾಕೆ ಆ ಯುವಕನ ಜೊತೆ ಮಗಳ ಮದುವೆ ಮಾಡಿಸುವುದಕ್ಕೆ ನನ್ನ ಸಮುದಾಯದ ನಾಯಕರು ಮುಂದೆ ಬರುತ್ತಿಲ್ಲ..." ಎಂದು ಮಾಧ್ಯಮಗಳ ಜೊತೆ ಆ ತಾಯಿ ಇದೀಗ ಪ್ರಶ್ನಿಸಿದ್ದಾರೆ. ಹಾಗಂತ ಪ್ರಶ್ನೆಯೂ ಇದೆ. ಒಂದು ವೇಳೆ ಆತ ಮದುವೆಯಾದರೂ ಈ ಕುಟುಂಬ ಸರಾಗವಾಗಿ ನಡೆಯಬಹುದೇ? ಆ ಬಗ್ಗೆ ಗ್ಯಾರಂಟಿ ಆ ಕುಟುಂಬಕ್ಕೆ ಇದೆಯೇ ಅಥವಾ ಮಗುವಿಗೆ ತೋರಿಸುವುದಕ್ಕೆ ತಂದೆ ಅಂತ ಒಬ್ಬರು ಇರಬೇಕು ಎಂಬ ಉದ್ದೇಶದಿಂದಲೇ ಮದುವೆಗೆ ಒತ್ತಾಯಿಸುತ್ತಿದ್ದಾರಾ? ಗೊತ್ತಿಲ್ಲ. ಹಾಗಂತ, ಯಾಕೆ ಹಿಂದೂ ಸಮುದಾಯ ಈ ಪ್ರಕರಣವನ್ನು ಬಗೆಹರಿಸಲು ಮುಂದೆ ಬರುತ್ತಿಲ್ಲ? ಮುಖಂಡರು ಯಾಕೆ ಜವಾಬ್ದಾರಿಯನ್ನು ವಹಿಸಿಕೊಂಡು ಈ ತಾಯಿಯ ಸಂಕಟಕ್ಕೆ ಪರಿಹಾರವಾಗುತ್ತಿಲ್ಲ? ಯುವತಿ ಮತ್ತು ಯುವಕನನ್ನು ಯಾಕೆ ಒಟ್ಟಾಗಿಸಲು ಮುಂದಾಗುತ್ತಿಲ್ಲ? ಕನಿಷ್ಠ ಮಾತನ್ನೇ ಆಡದೆ ಇವರೆಲ್ಲ ಯಾಕೆ ಮೌನಕ್ಕೆ ಜಾರಿದ್ದಾರೆ?
ಯುವತಿ ಮತ್ತು ಯುವಕ ನಿಜಕ್ಕೂ ಮನಸಾರೆ ಪ್ರೀತಿಸಿದ್ದರು ಅನ್ನೋದು ಆ ಯುವತಿಯ ಮಾತಿನಿಂದಲೇ ಗೊತ್ತಾಗುತ್ತದೆ. ಆಕೆ ಎಂದು ಕೂಡ ಆತನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿಯೇ ಇಲ್ಲ. ಆತನನ್ನು ಕೆಟ್ಟವನೆಂದು ಧೂರಿಯೂ ಇಲ್ಲ. ಪರಿಸ್ಥಿತಿಯ ಒತ್ತಡದಿಂದಲೋ ಹೆತ್ತವರು ಅಥವಾ ಇನ್ನಿತರರ ಮಾತಿನ ಬಲದಿಂದಲೋ ಆತ ಈಗ ತಪ್ಪಿಸಿಕೊಳ್ಳುತ್ತಿರುವಂತಿದೆ. ಇವು ಏನೇ ಇದ್ದರೂ ಈ ಇಬ್ಬರನ್ನು ಜೊತೆಯಾಗಿಸುವುದು ಬಹಳ ಒಳ್ಳೆಯದು. ಪರಸ್ಪರ ಮುಖಕ್ಕೆ ಮುಖ ಕೊಟ್ಟು ಮಾತಾಡಿದಾಗ ಮತ್ತು ಹಳೆಯ ಪ್ರೇಮವನ್ನು ನೆನಪಿಸಿಕೊಂಡಾಗ ಆ ಇಬ್ಬರೂ ವಿವಾದವನ್ನೆಲ್ಲ ಮರೆತಾರು. ಮತ್ತೆ ಪ್ರೇಮಿಗಳಾಗಿ ಬದುಕು ಪ್ರಾರಂಭಿಸಲು ಮನಸ್ಸು ಮಾಡಿಯಾರು.
ಇವತ್ತು ಆ ತಾಯಿಯ ಮಾತುಗಳನ್ನು ಕೇಳಿ ಸಂಕಟವಾಯಿತು.
