ಶಂಕರಪ್ಪ ಬಳ್ಳೇಕಟ್ಟೆಗೆ "ಸೇವಾ ರತ್ನ ಪ್ರಶಸ್ತಿ , ಪ್ರದಾನ

ಭಾಸ್ಕರ ಪತ್ರಿಕೆ
0

ತಿಪಟೂರು: ರಾಜಧಾನಿ ಬೆಂಗಳೂರಿನ ಎಂ.ಜಿ ರಸ್ತೆಯ ಎಕ್ಸಿಸ್ ಬ್ಯಾಂಕ್ ನ ಕೇಂದ್ರೀಯ ಕಛೇರಿ ಸಭಾಂಗಣದಲ್ಲಿ  ಆಕ್ಸಿ ಮ್ಯಾಕ್ಸ ಲೈಫ್ ಇನ್ಸರೆನ್ಸ್ ಕಂಪನಿಯ 25ನೇ ವಾರ್ಷಿಕೋತ್ಸವದ ಸಲುವಾಗಿ ಸಾಹಿತ್ಯ ಹಾಗು ಸಾಮಾಜಿಕ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರನ್ನು ಗೌರವಿಸಲಾಯಿತು.

ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ರೈತಕವಿ ಡಾ.ಪಿ.ಶಂಕರಪ್ಪ ಬಳ್ಳೇಕಟ್ಟೆರವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ರಾಜ್ಯಮಟ್ಟದ "ಸೇವಾರತ್ನ; ಪ್ರಶಸ್ತಿ  ಪ್ರದಾನ ಮಾಡಲಾಯಿತು ‌. ಶಂಕರಪ್ಪ ಬಳ್ಳೇಕಟ್ಟೆರವರು ೧೯೯೧ರ  ಸಾಕ್ಷರತಾ ಆಂದೋಲನದಲ್ಲಿ  ಅನಕ್ಷರಸ್ಥರನ್ನಾ ಅಕ್ಷರಸ್ಥರನ್ನಾಗಿಸಲು ಸತತ ಹತ್ತು ವರ್ಷಗಳ ಸ್ವಯಂ ಸೇವಕರಾಗಿ ಸೇವೆ, ಮುಂದುವರಿಕೆ ಶಿಕ್ಷಣ ಕೇಂದ್ರದಲ್ಲಿ  ಪ್ರೇರಕರಾಗಿ  ಸಾಕ್ಷರತಾ ಸಂಘಗಳ ಮೂಲಕ ಮಹಿಳಾ ಸಬಲೀಕರಣ  ಸೇವೆ, ಗ್ರಾಮೀಣ ಗ್ರಂಥಾಲಯದಲ್ಲಿ ಮಕ್ಕಳ ವಿಶೇಷ ಚಟುವಟಿಕೆಗಳೊಂದಿಗೆ ನಿತ್ಯನಿರಂತರ ಕಲಿಕಾ ಸೇವೆ,         ಕನ್ನಡ ಸಾಹಿತ್ಯ ಪರಿಷತ್ತಿನ ಹಲವು ದಶಕಗಳಿಂದ ಕಲೆ ಸಾಹಿತ್ಯ ,ಕವಿ ಗೋಷ್ಟಿ ಸಾಂಸ್ಕೃತಿಕ,  ಜಾನಪದ  ಉಳಿವಿಗಾಗಿ ಸೇವೆ, ಸ್ವಯಂ ಸಹಜ ಕೃಷಿ ಸೇವೆ, ಬಡ ಮಕ್ಕಳ ವಿದ್ಯಾಭ್ಯಾಸ ಸೇವೆ,ಸಾಹಿತ್ಯದಲ್ಲಿ "ಸ್ಪರ್ಶ ಸ್ಪೂರ್ತಿ; ಕವನ ಸಂಕಲನ  ಪುಸ್ತಕ ಬಿಡುಗಡೆ "ಹೃದಯದ ಹೂಗಳು; ನಂತರ "ಸಾವಿರಾರು ಆಧುನಿಕ ವಚನಗಳು; ನಿತ್ಯ ನುಡಿಮುತ್ತುಗಳು ಸಾಮಾಜಿಕ ಜಾಲತಾಣದಲ್ಲಿ ಸಾಹಿತ್ಯಾಭಿಮಾನಿಗಳ  ಮನ ಸೂರೆಗೊಂಡಿವೆ. ಈ ಸಂದರ್ಭದಲ್ಲಿ ಕಂಪನಿಯ ಅಧಿಕಾರಿಗಳಾದ ಸಂದೀಪ್, ಪುಷ್ಪ, ಪವಿತ್ರ, ಸಯೀದಾ ನಜನೀನ್ , ಲೋಹಿತ್, ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತಿತಲಿದ್ದು ಪ್ರಶಸ್ತಿ ಪುರಸ್ಕೃತರಿಗೆ ಕರ್ನಾಟಕ ಸಂಪಾದಕರು ವರದಿಗಾರರ ಸಂಘದ ತುಮಕೂರು ಜಿಲಾಧ್ಯಕ್ಷರಾದ ಡಾ. ಭಾಸ್ಕರ್‌ ಹಾಗೂ ತಿಪಟೂರು ತಾಲ್ಲೂಕಿನ ಸರ್ವಸದಸ್ಯರು  ಆತ್ಮೀಯ ಅಭಿನಂದನೆ ಸಲ್ಲಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*