ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 4ನೇ ಪುಣ್ಯ ತಿಥಿ

ಭಾಸ್ಕರ ಪತ್ರಿಕೆ
0




ತಿಪಟೂರು: ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ ಹಾಗೂ ಪ್ರಿಂಟ್ ಮೀಡಿಯಾ ಮತ್ತು ಸೋಶಿಯಲ್ ಮೀಡಿಯಾ ಸಂಘ ಮತ್ತು ಅಖಿಲ ಕರ್ನಾಟಕ ಯುಟುಬರ್ಸ್ ಸಂಘದ ವತಿಯಿಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 4ನೇ ವರ್ಷದ ಪುಣ್ಯ ಸ್ಮರಣೆಯನ್ನು ತಿಪಟೂರಿನ ಹಾಸನ ವೃತ್ತದಲ್ಲಿರುವ ಭಾಸ್ಕರ್ ಪತ್ರಿಕೆ ಕಚೇರಿ ಆವರಣದಲ್ಲಿ ಸಾಂಕೇತಿಕವಾಗಿ ಮತ್ತು ಸರಳವಾಗಿ ಹಮ್ಮಿಕೊಳ್ಳಲಾಗಿತ್ತು . ಈ ಸಂದರ್ಭದಲ್ಲಿ ಕೇ ರಾ ಸಂಘದ ತುಮಕೂರು ಜಿಲ್ಲಾ ಗೌರವಾಧ್ಯಕ್ಷರು, ಅಖಿಲ ಕರ್ನಾಟಕ ಯುಟುಬರ್ಸ್ ಸಂಘದ ರಾಜ್ಯಾಧ್ಯಕ್ಷರು, ಭಾಸ್ಕರ್ ಪತ್ರಿಕೆಯ ಸಂಪಾದಕರು ಆದ ಡಾ. ಭಾಸ್ಕರ್ ಮಾತನಾಡಿ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕರ್ನಾಟಕದ ಅತಿ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ನಟ ಇಂತಹ ಒಬ್ಬ ನಟ ನಮ್ಮನ್ನು ಅಗಲಿ ಇಂದಿಗೆ ನಾಲ್ಕು ವರ್ಷಗಳಾಯಿತು ಇವರು ಮಾಡಿದಂತಹ ಸಮಾಜಮುಖಿ ಕೆಲಸಗಳು ಅವರನ್ನು ಈ ಸಮಾಜದಲ್ಲಿ ಇನ್ನೂ ಜೀವಂತವಾಗಿರಿಸಿವೆ ಸಾವಿರಾರು ಮಕ್ಕಳಿಗೆ ಉಚಿತ ವಿದ್ಯಾ ದಾಸೊಹ ನೀಡಿದ ಕರ್ನಾಟಕದ ಕನ್ನಡದ ಕುಲ ತಿಲಕ ಎಂದರು ಇದೇ ಸಂದರ್ಭದಲ್ಲಿ ತಿಪಟೂರು ತಾಲೂಕ ಅಧ್ಯಕ್ಷರಾದ ಟಿ ರಾಜು ಬೆಣ್ಣೆನಹಳ್ಳಿ ಮಾತನಾಡಿ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಡಾಕ್ಟರ್ ರಾಜಕುಮಾರ್ ಮತ್ತು ಪಾರ್ವತಮ್ಮನವರ ಕಿರಿಯ ಪುತ್ರನಾಗಿ ಚೆನ್ನೈನಲ್ಲಿ ಜನಿಸಿ ಕರ್ನಾಟಕದಲ್ಲಿ ಬಾಲ ನಟನಾಗಿ ಸುಮಾರು 14 ಚಿತ್ರಗಳಲ್ಲಿ ನಾಯಕನಟನಾಗಿ ಸುಮಾರು 20 ಚಿತ್ರಗಳಲ್ಲಿ ನಡೆಸಿ ಕನ್ನಡಿಗರನ್ನು ರಂಜಿಸಿದ ಕಲಾವಿದ ಇಂತಹ ಕಲಾವಿದನನ್ನು ಕಲಾವಿದನನ್ನು ವಿಧಿ ನಮ್ಮಿಂದ ಕರೆದುಕೊಂಡಿತು ಇಂತಹ ಮಹಾನ್ ಪುರುಷ ಮತ್ತೊಮ್ಮೆ ಹುಟ್ಟಿ ಕನ್ನಡಿಗರ ಪಾಲಿನ ಪುನೀತವಾಗಲಿ ಎಂದರು ಇದೇ ಸಂದರ್ಭದಲ್ಲಿ ನಿವೃತ್ತ ಎಲ್ಐಸಿ ಅಧಿಕಾರಿ ಜಯದೇವಪ್ಪ, ಭವಾನಿ ಶಂಕರ್, ತಾಲೂಕ್ ಸಂಘಟನಾ ಕಾರ್ಯದರ್ಶಿ , ಮಂಜು ಗುರಗದಹಳ್ಳಿ, ಕಾರ್ಯದರ್ಶಿ ಡಿ ಮಂಜುನಾಥ್ ಹಾಲ್ಕುರಿಕೆ, ಕಿರಣ್ ಟಿಂಬರ್, ಸಂತೋಷ್ ಅವಿನಾಶ್ ಇನ್ನು ಮುಂತಾದ ಅಪ್ಪು ಅಭಿಮಾನಿಗಳು ಅವರ ಭಾವಚಿತ್ರಕ್ಕೆ ಭಾವಪೂರ್ಣ ನಮನವನ್ನು ಸಲ್ಲಿಸಿದರು 

 ವರದಿ :ಟಿ ರಾಜು ಬೆಣ್ಣೆನಹಳ್ಳಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*