ತಿಪಟೂರು: ನಗರದ ಹಾಸನ ಸರ್ಕಲ್ ಗ್ರಾಂಡ್ ಹೋಟೆಲ್ ನಲ್ಲಿ ತಿಪಟೂರು ತಾಲೂಕಿನ ಕೇರಾ ಮತ್ತು ಪ್ರಿಂಟ್ ಮೀಡಿಯಾ ವರದಿಗಾರರ ಸಂಘದಿಂದ ಶುಭ ವಿಶ್ವಕರ್ಮ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ,ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ೭೦ನೇ ಕನ್ನಡ ರಾಜ್ಯೋತ್ಸವ ಆಚರಣೆ ಮತ್ತು ವಿವಿಧ ಕ್ಷೇತ್ರದ ಸಾಧನೆಗೈದ ಸಾಧಕರಿಗೆ ಹಾಗೂ ಪತ್ರಕರ್ತರಿಗೆ ಸನ್ಮಾನ ಮಾಡಿದರು.
ಈ ಸಮಯದಲ್ಲಿ ಸಂಘದ ಜಿಲ್ಲಾ ಗೌರವಾಧ್ಯಕ್ಷರಾದ ಡಾಕ್ಟರ್ ಭಾಸ್ಕರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವೇದಿಕೆಯಲ್ಲಿ ಆಸೀನರಾಗಿರುವ ಗಣ್ಯರಿಗೆ ವಂದಿಸಿ ತಿಪಟೂರು ತಾಲೂಕಿನ ನೊಣವಿನಕೆರೆ ಗ್ರಾಮದ ಅಸಾಮಾನ್ಯ ಜ್ಞಾನ ಹೊಂದಿರುವ ವರ್ಡ್ ಬುಕ್ ಆಫ್ ರೆಕಾರ್ಡ್ ಪುರಸ್ಕೃತ ಪ್ರಶಸ್ತಿಗೆ ಭಾಜಕರಾಗಿರುವ ಪುಟ್ಟ ಬಾಲಕಿ ಕುಮಾರಿ ಲೇಖನ ಎ.ಆರ್. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಇಂದು ಆ ಪುಟ್ಟ ಬಾಲಕಿಯ ಮುಂದೆ ನಾವೆಲ್ಲರೂ ಚಿಕ್ಕವರಾಗಿದ್ದೇವೆ ಹಾಗಾಗಿ ಅಂತಹ ಒಂದು ಪ್ರತಿಮೆಯನ್ನ ಗುರ್ತಿಸುವುದು ನಮ್ಮ ಮುಖ್ಯ ಕರ್ತವ್ಯ . ಹಾಗೆಯೇ ಈ ಬಾಲಕಿ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿ, ಕನ್ನಡದ ನಾಡು ನುಡಿಯ ಬಗ್ಗೆ ವಿವರಿಸಿದರು.
ಅದೇ ಸಮಯದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಂತ ಕವಿ ಮತ್ತು ಸಾಹಿತಿಗಳಾದ ಬಳ್ಳೆ ಕಟ್ಟೆ ಶಂಕ್ರಪ್ಪ ಮಾತನಾಡಿ ಕನ್ನಡ ರಾಜ್ಯೋತ್ಸವ ಒಂದು ದಿನಕ್ಕೆ ಸೀಮಿತವಾಗದೆ ವರ್ಷಾದ್ಯಂತ ಆಚರಣೆಗೆ ಮಾಡಬೇಕು ಮೊದಲನೆಯದಾಗಿ ನಾವು ಹೆಚ್ಚು ಕನ್ನಡ ಭಾಷೆಗೆ ಆದ್ಯತೆ ಕೊಡಬೇಕು ಎಂದರು. ನಂತರ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಭಾಗವಹಿಸಿದ ಸಾಮಾನ್ಯ ಜ್ಞಾನ ಹೊಂದಿರುವ ಕುಮಾರಿ ಲೇಖನ ಎ. ಆರ್. ಮಾತನಾಡಿ ಕನ್ನಡ ಮತ್ತು ಕನ್ನಡಾಂಬೆಯ ಮತ್ತು ಕನ್ನಡ ರಾಜ್ಯೋತ್ಸವದ ಹಿನ್ನೆಲೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ್ ಅಧ್ಯಕ್ಷರಾದ ಸತೀಶ್ ಮಾರನಗೆರೆ ಮಾತನಾಡಿ
ನಾವು - ನೀವು ಎಲ್ಲರೂ ಸೇರಿ ಕನ್ನಡವನ್ನು ಬಳಸುವ, ಬೆಳೆಸುವ ಸಂಕಲ್ಪವನ್ನು ಈ ದಿನ ಸ್ವೀಕರಿಸೋಣ. ನೆಲದ ಭಾಷೆ ಮನದ ಭಾಷೆಯಾಗಲಿ, ಕನ್ನಡದ ಚಿಗುರು ಎಲ್ಲರೆದೆಯೊಳಗೆ ಮೊಳಕೆಯೊಡೆಯಲಿ ಎಂದರು.
ಪ್ರಿಂಟ್ ಮೀಡಿಯಾ ಮತ್ತು ಸೋಶಿಯಲ್ ಮೀಡಿಯಾ ಸಂಘದ ರಾಜ್ಯಾಧ್ಯಕ್ಷರಾದ ಸಿಡಿ ಕೃಷ್ಣಮೂರ್ತಿ ಮಾತನಾಡಿ ಕರ್ನಾಟಕದ ಅಂಕು ಡೊಂಕುಗಳನ್ನು ತಿದ್ದುವಂತ ಕೆಲಸವನ್ನು ಪತ್ರಿಕಾ ವರ್ಗ ಇಂದು ಕಾರ್ಯನಿರ್ವಹಿಸುತ್ತಿದೆ. ಆದರೆ ಪತ್ರಕರ್ತರಿಗೆ ಸರ್ಕಾರ ಹೆಚ್ಚಿನದಾಗಿ ಸವಲತ್ತು ಕೊಡಬೇಕೆಂದರು.
ದಲಿತ ಸಂಘರ್ಷ ಸಮಿತಿ ಜಕ್ಕನಹಳ್ಳಿ ಮೋಹನ್ ಮಾತನಾಡಿ ಬ್ಯಾಂಕುಗಳಲ್ಲಿ ಕನ್ನಡದವರು ಕಾರ್ಯನಿರ್ವಹಿಸಬೇಕು ಹಾಗೂ ಕನ್ನಡ ನಾಮಫಲಕ ಹಾಕಬೇಕು ಹೆಚ್ಚಿನದಾಗಿ ಕನ್ನಡದವರಿಗೆ ಆದ್ಯತೆ ಕೊಡಬೇಕು. ಆದರೆ ಕೆಲವು ಬ್ಯಾಂಕುಗಳ ಅಧಿಕಾರಿಗಳು ಕನ್ನಡ ಭಾಷೆಯನ್ನೇ ಮಾತನಾಡದೆ ಸಾರ್ವಜನಿಕರು ತುಂಬಾ ಸಮಸ್ಯೆ ಎದುರಿಸುತ್ತಿದ್ದು . ಇದನ್ನು ಸಹ ಸರಿದೂಗಿಸುವಂಥ ಕೆಲಸವನ್ನು ಪತ್ರಕರ್ತರು ಮಾಡಬೇಕು . ಇಂದಿನ ಕೆಲವು ಪತ್ರಕರ್ತರು ನೈಜವಾಗಿ ಸುದ್ದಿ ಬಿತ್ತರಿಸಬೇಕು. ಪತ್ರಕರ್ತರ ವೃತ್ತಿ ಬಹಳ ಅತ್ಯ ಅಮೂಲ್ಯವಾದದ್ದು. ಕನ್ನಡ ನಾಡು ,ನುಡಿ, ಸಂಸ್ಕೃತಿಯನ್ನು ಅವುಗಳನ್ನು ಉಳಿಸಿ ಬೆಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ನಂತರ ಸಂಘದ ಅಧ್ಯಕ್ಷರಾದ ಟಿ ರಾಜು ಬೆಣ್ಣೆನಹಳ್ಳಿ ಕನ್ನಡದ ಬಗ್ಗೆ ವಿಸ್ತಾರವಾಗಿ ಮಾತನಾಡಿ ನಿರೂಪಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ವಿವಿದ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಹಾಗೂ ಪತ್ರಕರ್ತರಿಗೂ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮೈಲಾರಪ್ಪ, ಕವಿತಾ ಮಹೇಶ್, ಶ್ವೇತಾ . ಮಂಜುನಾಥ ಡಿ, ಹಾಲ್ಕುರಿಕೆ ಮಂಜುನಾಥ್ ಗುರುಗದಹಳ್ಳಿ,ಪುಟ್ಟಸ್ವಾಮಿ, ಕಾಂತರಾಜ್, ಸಿದ್ದೇಶ್, ಮೋಹನ್ ಕುಮಾರ್, ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪದಾದಿಕಾರಿಗಳು , ದಲಿತ ಪರ ಮುಖಂಡರು, ಮಹಿಳೆಯರು, ಹಿರಿಯ ಗಣ್ಯರು.ಮತ್ತಿತರು ಉಪಸ್ಥಿತರಿದ್ದರು.
ವರದಿ: ಮಂಜುನಾಥ್ ಡಿ ತಿಪಟೂರು
