ಶ್ರೀ ಕ್ಷೇತ್ರ ಕಾಳಮ್ಮನವರ ಬೆಟ್ಟದಲ್ಲಿ ಮೂಲ ಸೌಕರ್ಯ ಕಲ್ಪಿಸಿಕೊಡ ಬೇಕಾಗಿ ಕಾಳಿಕಾಂಬ ಕಮಟೇಶ್ವರ ಸೇವಾಭಿವೃದ್ಧಿ ಸಮಿತಿಯ ಮನವಿ

ಭಾಸ್ಕರ ಪತ್ರಿಕೆ
0

ತಿಪಟೂರು: ದಿನಾಂಕ 01-01-2026 ತಾಲ್ಲೂಕಿನ ವಿಶ್ವಕರ್ಮ ಸಮಾಜದ ವತಿಯಿಂದ  ಶ್ರೀ ಕ್ಷೇತ್ರ ಕಾಳಮ್ಮನವರ ಬೆಟ್ಟದಲ್ಲಿ ಮೂಲ ಸೌಕರ್ಯಗಳಿಲ್ಲರೆ ಭಕ್ತಾಧಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ತಹಶಿಲ್ದಾರರಿಗೆ ತಾಲ್ಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು, ಬೆಟ್ಟದಲ್ಲಿ ಕರ್ನಾಟಕದ ಎಲ್ಲಾ ಭಾಗಗಳಿಂದ ವಿಶ್ವಕರ್ಮ ಸಮಾಜದ ಭಕ್ತಾದಿಗಳು ಪ್ರತಿದಿನವು ದೇವಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬರುತ್ತಿರುತ್ತಾರೆ. ಈ ದೇವಾಲಯವು ಇಲಾಖೆಗೆ ಒಳಪಟ್ಟದ್ದರೂ ಸಹ ಮೂಲಸೌಕರ್ಯಗಳಿಗೆ ಭಕ್ತಾದಿಗಳಿಗೆ ತುಂಬಾ ತೊಂದರೆಯಾಗುತ್ತಿರುತ್ತಿದೆ. ಈ ಸುಮಾರು ವರ್ಷಗಳಿಂದ ಹಲವಾರು ಬಾಂ ತಪಶೀಲ್ದಾರ್ ರವರಿಗೆ ಮನವಿ ಸಲ್ಲಿಸಿದರೂ ಯಾವುದೇ ಉಪಯೋಗವಾಗಿಲ್ಲವೆಂದು

ಈ ಕೆಳಕಂಡ ಸಮಸ್ಯೆಗಳನ್ನು ಬಗಹರಿಸಿಕೊಡಬೇಕಾಗಿ ತಾಲ್ಲೂಕಿನ ವಿಶ್ವಕರ್ಮ ಸಮಾಜ ಕೋರಿದೆ

  • ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆ, ಮತ್ತು ಮಹಿಳೆಯರಿಗೆ ಶೌಚಾಲಯ ಮತ್ತು ವಸತಿ ಗೃಹ ವ್ಯವಸ್ಥೆ.
  • ಭಕ್ತಾಧಿಗಳು ಹರಕೆ ರೂಪದಲ್ಲಿ ನೀಡಿರುವ/ನೀಡುತ್ತಿರುವ ಪಾತ್ರೆಗಳು, ಮೇಜುಗಳು, ಕುರ್ಚಿಗಳು ಮತ್ತು ಲಕ್ಷಂತಾರ ಬೆಲೇಯುಳ್ಳ ಸಾಮಗ್ರಿಗಳು ಭದ್ರತೆಗಳಿಲ್ಲದೆ ಕಳ್ಳತನವಾಗುತ್ತಿದೆ. ಇದಕ್ಕೆ ಭದ್ರತೆ ಒದಗಿಸುವ ವ್ಯವಸ್ಥೆ.
  • ದೇವಾಲಯದಲ್ಲಿ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳಲು ಸರ್ಕಾರದ ವತಿಯಿಂದ ಮೇಲ್ವಿಚಾರಣೆ ವಹಿಸಲು ಅಧಿಕಾರಿಗಳನ್ನು ನೇಮಿಸುವ ವ್ಯವಸ್ಥೆ.
  • ಶ್ರೀ ಕಾಳಮ್ಮನ ಬೆಟ್ಟದ ಜಾತ್ರೆಯಲ್ಲಿ ದೇವರ ಉತ್ಸವಮೂರ್ತಿಗೆ ಉಡುಗೊರೆಯಾಗಿ ನೀಡಿರುವ ಲೋಹದ ಆನೆಯ ಭದ್ರತೆಯಿಲ್ಲದೆ ಕಳ್ಳತನವಾಗಿದೆ. ಈ ವಿಚಾರವನ್ನು ಪೋಲೀಸ್ ಇಲಾಖೆ ಹಾಗೂ ತಹಸೀಲ್ದಾರ್‌ರವರು ಗಮನಕ್ಕೆ ತಂದಿದ್ದು, ಯಾವುದೇ ರೀತಿ ಉಪಯೋಗಿಲ್ಲ ಇದರ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ.
  • ತಹಸೀಲ್ದಾರ್‌ರವರು ಗಮನಕ್ಕೆ ತಂದಿದ್ದು, ಯಾವುದೇ ರೀತಿ ಉಪಯೋಗಿಲ್ಲ. ಇದರ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ 5. ದೇವಾಲಯದ ಉತ್ಸವ ಮೂರ್ತಿಯ ಹಿತ್ತಾಳೆಯ ಆನೆಯನ್ನು ಮನು ಮಾಡಿಸಿಕೊಡಬೇಕಾಗಿ ವಿನಂತಿ.
  • ದೇವಾಲಯದ ಉತ್ಸವ ಮೂರ್ತಿಯ ಹಿತ್ತಾಳೆಯ ಆನೆಯನ್ನು ಪುನಃ ಮಾಡಿಸಿಕೊಡಬೇಕಾಗಿ ವಿನಂತಿ
  • ಕಾಳಮ್ಮನ ಬೆಟ್ಟದಲ್ಲಿ ಮೂಲ ದೇವತೆಗೆ ಹಾಗೂ ಉತ್ಸವ ಮೂರ್ತಿಗೆ ಭಕ್ತಾದಿಗಳು ಹರಕೆ ರೂಪದಲ್ಲಿ ನೀಡಿರುವ ಚಿನ್ನ ಮತ್ತು ಬೆಳ್ಳಿ ಒಡವೆಗಳಿಗೆ ಭದ್ರತೆ ಒದಗಿಸುವ ಬಗ್ಗೆ ಹಾಗೂ ಇವುಗಳ ಸಂಪೂರ್ಣ ಜವಾಬ್ದಾರಿಯನ್ನು ಯಾರಿಗೆ ವಹಿಸಿದ್ದೀರಿ. ಇದರ ಬಗ್ಗೆ ಲಿಖಿತ ರೂಪದಲ್ಲಿ ಮಾಹಿತಿ ಒದಗಿಸುವ ಬಗ್ಗೆ.
  • ಶ್ರೀ ಕಾಳಮ್ಮನ ಬೆಟ್ಟದಲ್ಲಿ ಶುಭಸಮಾರಂಭಗಳಿಗೆ ಇತ್ಯಾದಿ ಕಾರ್ಯಕ್ರಮಗಳಿಗೆ ಸುಸಜ್ಜಿತವಾಗಿ ಒಂದು ಸಮುದಾಯಭವನ ಹಾಗೂ ವಸತಿಗೃಹ ನಿರ್ಮಿಸಿಕೊಡುವ ಬಗ್ಗೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*