ಹಿಂದೂ ಪತ್ರಿಕೆಯ ಸಂಪಾದಕರು ಮಾಜಿ ವಿಧಾನ ಪರಿಷತ್ ಸದಸ್ಯರಾದ ಪಿ ರಾಮಯ್ಯನವರ ಶ್ರದ್ಧಾಂಜಲಿ

ಭಾಸ್ಕರ ಪತ್ರಿಕೆ
0

ತಿಪಟೂರು: ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘದ ತಾಲೂಕು ಘಟಕದ  ವತಿಯಿಂದ ಹಿಂದೂ ಪತ್ರಿಕೆಯ ಸಂಪಾದಕರು ಮಾಜಿ ವಿಧಾನ ಪರಿಷತ್ ಸದಸ್ಯರಾದ  ಪಿ ರಾಮಯ್ಯನವರು ದೈವಾಧೀನರಾದ ಪ್ರಯುಕ್ತ ಅವರ ಶ್ರದ್ಧಾಂಜಲಿಯನ್ನ ತಿಪಟೂರಿನ ಹಾಸನ ವೃತ್ತದಲ್ಲಿರುವ ನಂದಿನಿ ಮಳಿಗೆ ಆವರಣದಲ್ಲಿ ಸಾಂಕೇತಿಕವಾಗಿ ಮತ್ತು ಸರಳವಾಗಿ ಹಮ್ಮಿಕೊಳ್ಳಲಾಗಿತ್ತು. ಹಿರಿಯ ವಿಶ್ಲೇಷಕ ಪತ್ರಕರ್ತರು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಆದ ಇವರು ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ, ಇವರ ಈ ಅಗಲಿಕೆಯಿಂದ ಪತ್ರಿಕಾ ಮಾಧ್ಯಮ ಬಡವಾಗಿದೆ ಸುಮಾರು ವರ್ಷಗಳ ಕಾಲ ಪತ್ರಿಕಾ ರಂಗದಲ್ಲಿ ತಮ್ಮ ಸೇವೆಯನ್ನು ಮುಡಿಪಾಗಿಸಿ ವಯೋಸಹಜತೆಯಿಂದ  ಇಂದು ಅವರ ಪಯಣವನ್ನು ಮುಗಿಸಿದ್ದಾರೆ ಅವರು ಅವರ ಪತ್ನಿ ಪುತ್ರಿ ಹಾಗೂ ಮೂವರು ಮಕ್ಕಳು ಮತ್ತು ಅಪಾರ ಬಂದು ಬಳಗವನ್ನ ಬಿಟ್ಟು ಅಗಲಿದ್ದಾರೆ ಇವರಿಗೆ ದೇವರು ಶಾಂತಿಯನ್ನು ನೀಡಲಿ ಎಂದು ಒಂದು ನಿಮಿಷ ಮೌನ ಆಚರಣೆಯ ಮುಖಾಂತರ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು . ಈ ಸಂದರ್ಭದಲ್ಲಿ ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘದ ತುಮಕೂರು ಜಿಲ್ಲಾ ಗೌರವಾಧ್ಯಕ್ಷರಾದ ಮತ್ತು ಭಾಸ್ಕರ್ ಪತ್ರಿಕೆ ಸಂಪಾದಕರಾದ ಡಾಕ್ಟರ್ ಭಾಸ್ಕರ್ ತಿಪಟೂರು ತಾಲೂಕ ಅಧ್ಯಕ್ಷರಾದ ಟಿ ರಾಜು ಬೆಣ್ಣೇನಹಳ್ಳಿ ಕಿರಣ್, ಮಾದಿಹಳ್ಳಿ ಕೆ ಐ ಟಿ ಪ್ರಕಾಶ್ ಚಂದ್ರಶೇಖರ್ ಇನ್ನು ಮುಂತಾದವರು ಆಗಮಿಸಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವರದಿ: ಟಿ ರಾಜು ಬೆಣ್ಣೇನಹಳ್ಳಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*